Beauty tips in Kannada: ಹೊಳೆಯುವ ಚರ್ಮಕ್ಕೆ ಸುಲಭ ಮನೆಮದ್ದು

Posted on

Beauty tips

Home remedies for Glowing skin

Beauty tips in Kannada: ಶರೀರ ಸೌಂದರ್ಯದಲ್ಲಿ ಚರ್ಮದ ಪಾತ್ರ ಅತ್ಯಂತ ಪ್ರಮುಖ ಎಂಬುದು ಸತ್ಯ, ಸುಂದರವಾದ ತಚೆ, ಚರ್ಮ, ಮೈಕಾಂತಿ, ನಿಲವು, ಉಡುಗೆ, ತೊಡುಗೆ, ಮೈಮಾಟ ಎಲ್ಲಾ ವಿಷಯಗಳು ಒಂದನ್ನೊಂದು ಸ್ಪಂದಿಸಿದಂತೆ ಒಂದು ಹೆಣ್ಣಿನ ಸುಂದರ ರೂಪಕ್ಕೆ ಕಾರಣವಾಗುತ್ತವೆ.

ಹೆಣ್ಣೆಂದರೆ ಸೌಂದರ್ಯ, ಶೃಂಗಾರ, ಹೆಣ್ಣಿಗಾಗಿ ಶೃಂಗಾರ, ಬೇ ಶೃಂಗಾರಕ್ಕಾಗಿ ಹೆಣ್ಣು ಎಂದು ಜನರು ಹೇಳುವುದುಂಟು.

ನಮ್ಮ ಸೌಂದರ್ಯ, ಚರ್ಮ, ತಚೆಯನ್ನು ಕಾಪಾಡಿಕೊಳ್ಳಲು ಸೂಕ್ತ ಸಲಹೆಗಳನ್ನು ನಾನು ಇಲ್ಲಿ ನೀಡುತ್ತಾ ಇದ್ದೇನೆ.

ಚರ್ಮವನ್ನು ಸದಾ ಪರಿಶುಭ್ರವಾಗಿಟ್ಟುಕೊಂಡಿರಬೇಕು. ಅತಿಹೆಚ್ಚು ಬಿಸಿಯಾದ ನೀರು ಚರ್ಮದ ಕೋಮಲತೆಯನ್ನು ಕಡಿಮೆ ಮಾಡುತ್ತದೆ. ತಲೆಗೆ ಮತ್ತು ಮೈಗೆ ಉಗುರು ಬೆಚ್ಚಗಿನ ನೀರನ್ನು ಸ್ನಾನಕ್ಕೆ ಬಳಸಬೇಕು. ಯಾವುದೇ ಕ್ರೀಮ್ ಬಳಸುವ ಮುನ್ನ ಸ್ವಲ್ಪ ಕ್ರೀಮ್ ಮುಂಗೈಗೆ ಇಲ್ಲ ಕಿವಿಯ ಹಿಂದಿನ




” ಭಾಗಕ್ಕೆ ಸ್ವಲ್ಪ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ನೋಡಿ ಅದರಿಂದ ಉರಿ, ಬಣ್ಣ ಬದಲಾಗುವುದು ಕಂಡು ಬರದೇ ಇದ್ದಾಗ ಮಾತ್ರ ಅದನ್ನು ಮುಖ ಮತ್ತು ಮೈಗೆ ಬಳಸಿ.

ಅತಿಯಾದ ಸಿಹಿತಿಂಡಿಗಳು, ಜಿಡ್ಡಿನ ಆಹಾರ, ಬೇಕರಿ ತಿನಿಸುಗಳು ಚರ್ಮದಲ್ಲಿ ಬ್ಲಾಕ್‌ ಹೆಡ್ಸ್ ಉತ್ಪತ್ತಿ ಮಾಡುತ್ತವೆ. ಮೊಡವೆಗಳು ಇರುವವರಿಗೆ ಇವುಗಳು ಹೆಚ್ಚುವ ರಣ ಸಾಧ್ಯತೆಗಳಿವೆ. ಪ್ರತಿನಿತ್ಯ 4-5 ಲೀಟರ್‌ನಷ್ಟು ನೀರನ್ನು ಕುಡಿಯಬೇಕು. ಕನಿಷ್ಠ ಪಕ್ಷ 6-8 ಗಂಟೆಗಳ ಕಾಲ ನಿದ್ರೆ ಮಾಡಬೇಕು.

ಬಿಸಿಲು, ಧೂಳು, ಮಾಲಿನ್ಯ ಹೆಚ್ಚಾಗುತ್ತಾ ಇರುವುದರಿಂದ ಹೊರಗಡೆ ಹೋಗುವಾಗ 6 ಮೈಗೆ ಸನ್‌ಸ್ಟೀನ್ ಲೋಷನ್ ಲೇಪಿಸಿಕೊಳ್ಳಿ ಮತ್ತು ನಿಮ್ಮ ತಲೆಗೆ ಸ್ಟಾರಫ್ ಕಟ್ಟಿಕೊಂಡು ಹೊರಗೆ ಹೋಗಿ.

ಸಿಕ್ಕ ಸಿಕ್ಕ ಕ್ರೀಮ್‌, ಲೋಷನ್‌ಗಳನ್ನು ಬಳಸಿ ಚರ್ಮದ ಕಾಂತಿ ಹಾಳು ಮಾಡದೇ ಒಂ ತರಹದ ಒಳ್ಳೆಯ ಕಂಪನಿಯ ಕ್ರೀಮ್‌ಗಳನ್ನು ಬಳಸಿ.

ಹಣ್ಣು, ತರಕಾರಿ, ಹಸಿ ಸೊಪ್ಪು ಇವುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಚಪ್ಪ ಕಾಂತಿಯುತವಾಗಿ ಕಂಗೊಳಿಸುತ್ತದೆ.




ವಾರಕ್ಕೊಂದು ಬಾರಿಯಾದರು ಚರ್ಮಕ್ಕೆ ಮಸಾಜ್ ಮಾಡಿಕೊಳ್ಳಿ. ಕೊಬ್ರಿ ಎಣ್ಣೆ ಬ ಮೈಯಲ್ಲಾ ಮಸಾಜ್ ಮಾಡಿ ಅರ್ಧಗಂಟೆಯ ನಂತರ ಸ್ನಾನ ಮಾಡಿ ಇಲ್ಲವೇ ಬಾಥಿಂಗ್

ಆಯಿಲ್ (Bathing Oil) ತಯಾರಿಸಿಕೊಳ್ಳಿ :

1 ಕಪ್ ಆಲಿವ್ ಆಯಿಲ್ Olive oil
1 ಕಪ್ ಪಾಮ್ ಆಯಿಲ್ Palm oil
1 ಕಪ್ ಆಲಮಂಡ್ ಆಯಿಲ್ Almond oil
1/2 ಕಪ್ ವೀಟ್‌ ಜರ್ಮ Wheat germoil

ತಯಾರಿಸಿ ಇಟ್ಟುಕೊಂಡು ಮೈಗೆಲ್ಲಾ ಹಚ್ಚಿಕೊಂಡು ಮಸಾಜ್ ಮಾಡಿ ಅರ್ಧ ಗಂಟೆ ನಂತ ಸ್ನಾನ ಮಾಡಿರಿ.

ಸ್ವಲ್ಪ ಅರಶಿಣ, ಗೋಧಿಹಿಟ್ಟು ನೀರಿನಲ್ಲಿ ಹಾಕಿ ಅದಕ್ಕೆ ಎರಡು ಚಮಚ ಎಳ್ಳೆಣ್ಣೆ ಬೆರೆಸಿದ ಪೇಸ್ಟ್‌ನಂತೆ ಆಗುತ್ತದೆ. ಅದನ್ನು ಮೈಗೆ ಚೆನ್ನಾಗಿ ತಿಕ್ಕಿಕೊಂಡು ಒಣಗಲು ಬಿಟ್ಟು, ನಂತರ ಸ್ನಾನ ಮಾಡುವುದರಿಂದ ಚರ್ಮದ ಕಾಂತಿಗೆ ಒಳ್ಳೆಯದು.

What to avoid to get clear skin ?

Beauty tips in Kannada
Beauty tips in Kannada

ಅತಿಯಾಗಿ ಕ್ರೀಮ್‌ಗಳು, ಸೇಂಟ್‌ಗಳನ್ನು ಬಳಸುವುದು ಉತ್ತಮವಲ್ಲ.

ಕ್ಯಾಬೇಜ್ ಚರ್ಮ ಸೌಂದರ್ಯಕ್ಕೆ ತುಂಬಾ ಒಳ್ಳೆಯದು. ಆದ್ದರಿಂದ ಅದನ್ನು ಹೆಚ್ಚಾಗಿ ಸೇವಿಸಿ. ಕಬ್ಬಿಣಾಂಶವುಳ್ಳ ಆಹಾರ ಸೇವಿಸುವುದರಿಂದ ರಕ್ತಶುದ್ಧಿ, ವೃದ್ಧಿ ಹಾಗೂ ಚರ್ಮರು ಉಂಟಾಗುತ್ತದೆ.

ಎಣ್ಣೆ ಚರ್ಮದವರು ಯಾವಾಗಲೂ ಆಯಿಲ್ ಫ್ರೀ ಮಾಯಿಶ್ಚರೈಸರ್ ಬಳಸಿರಿ. ಬೇಸಿಗೆಯಲ್ಲಿ ದಿನಕ್ಕೆ 5-6 ಬಾರಿಯಾದರು ಮುಖತೊಳೆಯಿರಿ. ಪ್ರತಿಸಾರಿ ಸೋಪ್ ಹಾಕುವ ಬದಲು ಕಡೆಲೇಹಿಟ್ಟನ್ನು ಬಳಸಿ.

ಹೊರಗಡೆಯಿಂದ ಮನೆಗೆ ಬಂದ ತಕ್ಷಣ ಕೈಕಾಲುಗಳ ಜೊತೆಗೆ ಮುಖವನ್ನು ಕೂಡ ತೊಳೆದುಕೊ೦ಡರೆ ಧೂಳು, ಮಾಲಿನ್ಯದಿಂದ ಆಗುವ ಕೆಲವು ಪರಿಣಾಮಗಳನ್ನು ತಡೆಯಬಹುದು.

ದಿನಕ್ಕೊಂದು ಹಸಿ ಟಮೋಟ, ಒಂದು ಹಣ್ಣು ತಿನ್ನುವುದರಿಂದ ಮುಖದ ಸುಕ್ಕುಗಳು ದೂರವಾಗುತ್ತವೆ.

ವಯಸ್ಸಾದಂತೆ ಚರ್ಮದಲ್ಲಿ ಎಣ್ಣೆಯ ಅಂಶ ಕಮ್ಮಿಯಾಗಿ ಚರ್ಮ ತೆಳುವಾಗುತ್ತದೆ, ಬಿಗಿ ಕಳೆದುಕೊಳ್ಳುತ್ತದೆ. ಯೌವನದಲ್ಲಿ ಮೂರುವಾರಕ್ಕೆ ಒಮ್ಮೆ ಹೊಸ ಚರ್ಮ ಹುಟ್ಟಿಕೊಳ್ಳುತ್ತದೆ. ವಯಸ್ಸಾದಂತೆ ಈ ಕ್ರಿಯೆ ನಿಧಾನವಾಗುತ್ತಾ ಬರುತ್ತದೆ. ಇದರಿಂದ ಚರ್ಮ ಮಂಕಾಗಿ ಶುಷ್ಕವಾಗಿ ಕಾಣುತ್ತವೆ. ಆದ್ದರಿಂದ ಚರ್ಮದ ರಕ್ಷಣೆ ಆ ವಯಸ್ಸಿಗೆ ಇನ್ನು ಮುಖ್ಯ.

ಮೊಸರು ದೊಡ್ಡ ಕಪ್, ಬಾದಾಮಿ ಪುಡಿ ಕಾಲು ಟೇಬಲ್ ಸ್ಪೂನ್, ಎರಡು ಟೇಬಲ್ ಸ್ಪೂನ್ ಜೇನು, ಯಾವುದಾದರೂ ಬೀಜದ ಎಣ್ಣೆ, ಎರಡು ಟೇಬಲ್ ಸ್ಪೂನ್ ಎಲ್ಲವನ್ನು ಕಲಸಿ ಚರ್ಮಕ್ಕೆ ಹಚ್ಚಿ ಮಸಾಜ್ ಮಾಡಬೇಕು. ಸ್ವಲ್ಪ ಸಮಯದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.

ಬಾದಾಮಿ ಬೀಜಗಳನ್ನು ಸುಮಾರು ಕಾಲುಕಪ್‌ನಷ್ಟು ತೆಗೆದುಕೊಂಡು ನೆನೆಸಿಡಿ. ನೆಂದ ಬಾದಾಮಿಯ ಸಿಪ್ಪೆಯನ್ನು ತೆಗೆದು ಅದನ್ನು ನುಣ್ಣಗೆ ರುಬ್ಬಿ. ರುಬ್ಬಿಟ್ಟ ಬಾದಾಮಿಯಲ್ಲಿ ಒಂದು ಟೇಬಲ್ ಸ್ಪೂನ್ ಬೆಣ್ಣೆಯನ್ನು ಮಿಶ್ರ ಮಾಡಿಟ್ಟುಕೊಳ್ಳಿ.

ಈಗ ಒಂದು ಬಕೆಟ್ ನೀರಿಗೆ ಅರ್ಧ ಜೆನಿಗರ್ ಸೇರಿಸಿ ಅದರಿಂದ ಸ್ನಾನ ಮಾಡಿ, ನೆಂದ ಮೈಗೆ ಸಿದ್ಧಪಡಿಸಿಟ್ಟುಕೊಂಡ ಟೀಕಪ್‌ನಷ್ಟು ಮಿಶ್ರಣದಿಂದ ಮರ್ದನ ಮಾಡಿ ಹತ್ತು ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ, ಸಮುಯ ಇಲ್ಲದಿದ್ದರೆ ಈ ಮಿಶ್ರಣವನ್ನು ಮುಖ, ಕತ್ತು ಹಾಗೂ ಕೈಕಾಲುಗಳಿಗೆ ಮಾತ್ರ ಬಳಸಬಹುದು.

ಚರ್ದು ಸ್ಥಿತಿ ಸ್ಥಾಪಕತ್ವ ಕಳೆದುಕೊಳ್ಳದೇ ಇರಬೇಕೆಂದರೆ ವಿಟಮಿನ್‌ಗಳು ಇರುವ ಆಹಾರ, ತರಕಾರಿ, ಹಣ್ಣುಗಳನ್ನು ತಿನ್ನಬೇಕು.

ಕ್ಯಾರೆಟ್, ಬೀಟ್‌ರೂಟ್, ಗೆಣಸು, ಸೌತೆಕಾಯಿ, ನುಗ್ಗೆಕಾಯಿ, ದ್ರಾಕ್ಷಿಯಂತಹವು ಹೆಚ್ಚು ತಿನ್ನಬೇಕು. ಚರ್ಮವು ಒಣಗದಂತೆ, ನಳ ನಳಿಸುವಂತೆ ಇರಬೇಕೆಂದರೇ ಮೀನು ಎಣ್ಣೆಯನ್ನು ಸೇವಿಸಬೇಕು. ಚರ್ಮದಲ್ಲಿ ಹೊಳಪು ಕಡಿಮೆ ಆಗದೆ ಇರಬೇಕೆಂದರೆ ಕಬ್ಬಿಣಾಂಶವುಳ್ಳ ಮಿಶ್ರ ಪದಾರ್ಥಗಳನ್ನು ಬಳಸಬೇಕು.

ಹೆಚ್ಚಾಗಿ ತಾಜ ತರಕಾರಿ, ಸೊಪ್ಪು, ಮೀನು ತಿನ್ನಬೇಕು. ತ್ವಜೆಯ ಆದ್ರತೆಗಾಗಿ ದ್ರವ ಪದಾರ್ಥಗಳ ಪ್ರಮಾಣ ಕಡೆ ಗಮನ ಕೊಡಬೇಕು. ನೀರು, ಹಣ್ಣಿನ ರಸವನ್ನು ಹೇರಳವಾಗಿ ಕುಡಿಯಬೇಕು.

Here you learnt beauty tips in Kannada and we hope this article helped♥️

Before you go,

Also read: Health benefits of caraway seeds

Tags:

Leave a Comment

error: Content is protected !!