Hair care tips in Kannada |ಮಳೆಗಾಲ ಮತ್ತು ಚಳಿಗಾಲದಲ್ಲಿ ತ್ವಚೆ ಹಾಗೂ ಕೂದಲಿನ ಟಿಪ್ಸ

Hair care tips in Kannada, hair in Kannada, hair tips in Kannada, hair growth tips in Kannada.

ಸುಂದರ ಕೇಶ ರಾಶಿಗಾಗಿ

ಸಮೃದ್ಧ ಕೇಶರಾಶಿ ಸ್ತ್ರೀ ಇರಲಿ ಪುರುಷರೇ ಇರಲಿ ಅವರ ಸೌಂದರ್ಯವನ್ನು ಕೂದಲು ಇಮ್ಮಡಿಸುತ್ತವೆ. ಅದರಲ್ಲಿ ಸ್ತ್ರೀಯರು ಕೂಡಲು ಸುಂದರವಾಗಿ ಕಾಗಿ ಪಟ್ಟದಾಗಿ ಇರಬೇಕೆಂದು ಆಸೆಪಡುತ್ತಾರೆ, ಕಾಳಜಿವಹಿಸುತ್ತಾರೆ.

ಕೂದಲಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಹಲವಾರು ಕೂದಲು ಉದುರುವುದು, ಹೊಟ್ಟು… ಮುಂತಾದವು ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಕೆಲವು ಸಲಹೆ ಸೂಚನೆಗಳು.

ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ನಿಯಮಗಳನ್ನು ಪಾಲಿಸಬೇಕು. ವಾರಕ್ಕೆ ಒಂದು ಬಾರಿಯಾದರೂ ತಲೆ ಸ್ನಾನ ಮಾಡಬೇಕು. ಗಾಳಿ ಧೂಳಿಗೆ ಸುತ್ತುವವರು ವಾರಕ್ಕೆ ಎರಡು ಬಾರಿಯಾದರು ತಲೆಸ್ನಾನ ಮಾಡಿರಿ. ಸತ್ವ ಉಳ್ಳ ಅಲ್ಪಾಹಾರ, ಪ್ರೋಟೀನ್, ಐರನ್ ಇರುವಂತಹ ಆಹಾರ ಸೇವಿಸಬೇಕು, ಕರಿದ ಪದಾರ್ಥಗಳನ್ನು ಕಡಿಮೆ ಮಾಡಬೇಕು.
ಕೂದಲಿಗೆ, ಬುರುಡೆಗೆ ತೈಲದ ಅವಶ್ಯಕತೆ ಇರುತ್ತದೆ. ಆದ್ದರಿಂದ ವಾರಕ್ಕೆ ಒಂದು ಬಾರಿಯಾದರು ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಎಣ್ಣೆ ಕೂದಲು ಇರುವವರಿಗೆ ಮಸಾಜ್ ತಿಂಗಳಿಗೊಮ್ಮೆ ಸಾಕು. ಮಸಾಜ್ ಮಾಡುವುದರಿಂದ ರಕ್ತಸಂಚಲನ ವೃದ್ಧಿಸಿ ಕೂದಲಿನ ಆರೋಗ್ಯ ವೃದ್ಧಿಸುತ್ತದೆ.

ಕೂದಲನ್ನು ಗಟ್ಟಿಯಾಗಿ ಉಜ್ಜದೇ ಮೃದುವಾಗಿ ತೊಳೆದುಕೊಳ್ಳಿ.

ತಲೆಸ್ನಾನಕ್ಕೆ ತುಂಬಾ ಬಿಸಿ ನೀರು ಸೂಕ್ತವಲ್ಲ. ಯಾವಾಗಲು ಉಗುರು ಬೆಚ್ಚಗಿನ ನೀರು ಉಪಯೋಗಿಸಿ. ತಲೆಸ್ನಾನದ ನಂತರ ಕೂದಲನ್ನು ಡ್ರೈಯರ್ ನಿಂದ, ಬಿಸಿಲಿನಲ್ಲಿ ಒರಿಸಬೇಡಿ. ನೈಸರ್ಗಿಕವಾಗಿ ಒಣಗಲು ಬಿಡಿ. ನಂತರ ತಲೆ ಬಾಚಿಕೊಳ್ಳಿ.

ಬಿಸಿಲು, ಧೂಳಿನಲ್ಲಿ ತಿರುಗುವಾಗ ಬಿಸಿಲು ತಲೆಗೆ ಬಡಿಯದಂತೆ ಚುನ್ನಿ, ಸ್ಕಾರಫ್, ಛತ್ರಿಯ ಸಹಾಯ ಪಡೆದುಕೊಳ್ಳಿ.

ಸ್ವಿಮ್ಮಿಂಗ್‌ಗೆ ಹೋಗಿ ಬಂದ ನಂತರ ಚೆನ್ನಾಗಿ ಕ್ಲೋರಿನ್ ನೀರು ಹೊರಟು ಹೋಗುವಂತೆ ಸ್ನಾನ ಮಾಡಿ ನಂತರ ಶಾಂಪೂ ಹಾಕಿ ತಲೆ ತೊಳೆದುಕೊಳ್ಳಿ.

ಡ್ರೈಯರ್ ಹೆಚ್ಚಾಗಿ ಬಳಸುವುದರಿಂದ ಕೂದಲಲ್ಲಿ ಟ್ಸ್ ಉಂಟಾಗುತ್ತದೆ.

ತುದಿಗೂದಲನ್ನು 4-5 ವಾರಕ್ಕೆ ಒಂದು ಬಾರಿಯಾದರು ಕತ್ತರಿಸಿ. ಇದರಿಂದ ಪುಡಿಗೂದಲು ತುದಿ ಸಿಟ ಟ್ ಕೂದಲನ್ನು ಹೋಗಲಾಡಿಸಬಹುದು. 3 ತಿಂಗಳಿಗೊಮ್ಮೆಯಾದರು ಕೂದಲಿಗೆ ಮೆಹಂದಿ ಹಾಕಿ ಇದರ ನೈಸರ್ಗಿಕ ಗುಣಗಳು ಕೂದಲು ಉದುರುವುದು ಕಡಿಮೆ ಮಾಡಿಸಿ ಹೊಳಪನ್ನು ನೀಡುತ್ತದೆ.

ತಲೆಸ್ನಾನದ ನಂತರ ತಲೆಯನ್ನು ಕೂದಲನ್ನು ರಭಸದಿಂದ ಟವಲ್‌ ನಿಂದ ಒರಸಿಕೊಳ್ಳಬಾರದು. ಇದರಿಂದ ಕೂದಲು ಉದುರುವುದು ಜಾಸ್ತಿಯಾಗುತ್ತೆ. ಮೊದಲು ನಿಮ್ಮ ಕೂದಲು ಎಂತಹದ್ದೊಂದು ಪರೀಕ್ಷೆ ಮಾಡಿಕೊಳ್ಳಿ, ಒಣಕೂದಲು, ವೀಕ್ಷೆಗೂದಲು, ಮಿಶ್ರಕೂಡಲು ಮತ್ತು ಸಾಮಾನ್ಯಕೂದಲು ಇವು ನಾಲ್ಕು ಪ್ರಕಾರಗಳು.

ಕೂದಲು ಉದುರುವುದನ್ನು ತಡೆಗಟ್ಟಲು ಮತ್ತು ಕೇತ ಸೌಂದರ್ಯಕ್ಕಾಗಿ

ಮುಖ್ಯವಾದ ಮೂರು ಸೂತ್ರಗಳನ್ನು ಪಾಲಿಸಿದರೆ ಇದು ಸಾಧ್ಯ. ಆರೋಗ್ಯಪೂರ್ಣ ಕೂದಲಿಗೆ ಆಹಾರ, ತೈಲ ಜೀವನ ಮತ್ತು ಸ್ವಚ್ಛತೆ ಈ ಮೂರು ಅಂಶಗಳನ್ನು ಪಾಲಿಸಿದಲ್ಲಿ ತಲೆಗೂದಲು ಸೊಂಪಾಗಿ, ಕಾಂತಿಯುಕ್ತವಾಗಿರಲು ಸಾಧ್ಯ. ಚಹಾ ಡಿಕಾಕ್ಷನ್‌ ಮಾಡಿ ಸೋಸಿ, ಆರಿಸಿ ಅದರಲ್ಲಿ ತಲೆ ತೊಳೆಯುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.

ತೆಂಗಿನೇಣ್ಣೆ ಜೊತೆ ಕರಿಬೇವಿನ ಎಲೆಗಳನ್ನು ಉರಿಯಲ್ಲಿ ಚೆನ್ನಾಗಿ ಕಾಯಿಸಿ, ಆರಿದ ನಂತರ ಕೂದಲಿನ ಬುಡಕ್ಕೆ ತಾಗುವಂತೆ ಹಚ್ಚಿ ಮಸಾಜ್ ಮಾಡಿ, ಎರಡು ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡರೆ ಕೂದಲು ಕಪ್ಪಾಗಿ ದಟ್ಟವಾಗಿ ಬರುವುದಲ್ಲದೇ ಹೊಳಪಿನಿಂದ ಕೂಡಿರುತ್ತದೆ.

ಕರಿಬೇವಿನ ಒಣ ಎಲೆ ಚೂರುಗಳು, ಒಣನಿಂಬೆ ಸಿಪ್ಪೆಯ ಚೂರುಗಳು, ಶೀಗೆಕಾಯಿ, ಮೆಂತ್ಯ ಇವುಗಳನ್ನು ಸೇರಿಸಿ ಪುಡಿ ಮಾಡಿಕೊಂಡು ಅದಕ್ಕೆ ಹಸಿರು ಕಡಲೆಹಿಟ್ಟು ಸೇರಿಸಿ ಏ‌ಟೈಟ್ ಡಬ್ಬದಲ್ಲಿ ಸಂಗ್ರಹಿಸಿಡಿ, ಶಾಂಪೂವಿನ ಬದಲು ಇದನ್ನು ಬಳಸಬಹುದು.

ತಲೆಕೂದಲು ಉದುರಲು ಹಲವು ಕಾರಣಗಳುಂಟು. ಸತ್ವಪೂರ್ಣ ಆಹಾರದ ಕೊರತೆ, ತಾತ್ಕಾಲಿಕ ಅನಾರೋಗ್ಯ, ಗರ್ಭಧಾರಣೆ, ಬಾಣಂತಿಗೆ, ವಿಪರೀತ ಡಯಟ್ ಸೂಕ್ತ ಆರೈಕೆಯ ಕೊರತೆ ಇವೆಲ್ಲವೂ ಕಾರಣ ಕೂದಲಿಗೆ ಜಿಡ್ಡು ದೊರಕುವುದು ಅವಶ್ಯಕ. ಇದನ್ನು ಒದಗಿಸಲು ರಾತ್ರಿ ಮಲಗುವ ಮುನ್ನ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಬುಡದಿ೦ದಲೂ ಹಚ್ಚಿ ನಯವಾಗಿ ತಿಕ್ಕಬೇಕು. ಮರುದಿವಸ ಬೆಳಿಗ್ಗೆ ತಲೆಸ್ನಾನ ಮಾಡಬೇಕು.

ಕಡಲೆಟ್ಟು ಮೊಸರು ಬೆರೆಸಿ ತಲೆಗೂದಲನ್ನು ತೊಳೆಯಿರಿ, ಇದರಿಂದ ಕೂದಲು ಕಂಬನಿಯುತರಾಗಿ ಕಾಣುತ್ತದೆ.

ಅರ್ಧ ತೆಂಗಿನಹೋಳನ್ನು ತುರಿದುಕೊಂಡು ಮಿಕ್ಸಿಯಲ್ಲಿ ನೀರು ಹಾಕಿ ನುಣ್ಣಗೆ ಹುಳುಕೊಳ್ಳಿ, ತಲಸದ ಆ ಹಾಲನ್ನು ತಲೆಗೂದಲಿಗೆ ಚೆನ್ನಾಗಿ ಲೇಪಿಸಿ ಒಂದು ಗಂಟೆಯ ಸಂಸರ ತಲೆಸ್ನಾನ ಮಾಡಿ, ಈ ರೀತಿ ತಿಂಗಳಿಗೊಮ್ಮೆ ಮಾಡುವುದರಿಂದ ತಲೆಗೂದಲು ಉದುರುವುದು ನಿಲ್ಲುವುದಲ್ಲದೆ ಕೂದಲು ಕಪ್ಪಾಗಿ ದಟ್ಟವಾಗಿ ಬೆಳೆಯುತ್ತವೆ.

ತಲೆಗೆ ಚೆನ್ನಾಗಿ ಹುಳಿ ಮೊಸರು ಹಚ್ಚಿಕೊಳ್ಳಿ, ಫ್ರಿಜ್‌ನಲ್ಲಿ ಇಟ್ಟಿದ್ದು ಆಗಬಾರದು. ಮೊಸರು ಹಚ್ಚಿಕೊಂಡು ಆರಿದ ನಂತರ ಸ್ನಾನ ಮಾಡುವುದರಿಂದ ಕೂದಲು ಬೆಳೆಯುವುದು, ಹೊಟ್ಟು ನಿವಾರಣೆ, ಕೂದಲು ಹೊಳಪು ಬರುವುದು. 15 ದಿನಗಳಿಗೊಮ್ಮೆ ಹೀಗೆ ಮಾಡುತ್ತಾ ಇರಿ, ಕೂದಲಿಗೆ ಮೆಹಂದಿ ಎಲೆಗಳನ್ನು ರುಬ್ಬಿ ಚೆನ್ನಾಗಿ ಲೇಪಿಸಿದರೆ ಹೊಟ್ಟು ನಿವಾರಣೆ ಆಗುವುದು, ಜೊತೆಗೆ ಆರೋಗ್ಯದಾಯಕವೂ ಹೌದು.

ತಿಂಗಳಿಗೆ ಒಂದು ಬಾರಿ ಮೊಟ್ಟೆಯ ಬಿಳಿ ಭಾಗ ಕೂದಲಿಗೆ ಲೇಪಿಸಿ ಆರಿದ ನಂತರ ತಲೆ ತೊಳೆದುಕೊಳ್ಳುವುದರಿಂದ ಕೂದಲಿಗೆ ರೇಷ್ಮೆ ಹೊಳಪು ದೊರೆಯುವುದಲ್ಲದೆ ಉದುರುವರು ನಿಲ್ಲುತ್ತದೆ. ಜೊತೆಗೆ ಕೂದಲು ಬೆಳೆಯುತ್ತವೆ.

Women Hair care tips in Kannada

ಒಂದು ಕಪ್ ಬಿಸಿನೀರಲ್ಲಿ ಸ್ವಲ್ಪ ಮೆಹೆಂದಿ (ಗೋರಂಟಿ) ಪುಡಿ, ನೆಲ್ಲಿಕಾಯಿ ಪುಡಿ, ಚಹದೆಲೆ, ಸ್ವಲ್ಪ ನಿಂಬೆರಸ, ರೋಸ್‌ ವಾಟರ್ ಬೆರಸಿ ಆರು ಗಂಟೆಗಳ ಕಾಲ ನೆನೆ ಹಾಕಲು ಬಿಟ್ಟು ಅದನ್ನು ಕೂದಲುಗಳಿಗೆ ತಿಕ್ಕಿಕೊಂಡು, ಎರಡು ಗಂಟೆ ನಂತರ ತಲೆ ಸ್ನಾನ ಮಾಡುವುದರಿಂದ ಕೂದಲು ಆರೋಗ್ಯಕರವಾಗಿ ಇರುತ್ತೆ ಈ ರೀತಿ 15 ದಿನಗಳಿಗೊಮ್ಮೆಯಾದರು ಮಾಡಬೇಕು. ಒಂದು ಗ್ಲಾಸ್ ಬಿಸಿನೀರಿನಲ್ಲಿ ಹಿಡಿಯಷ್ಟು ತುಳಸಿ ಎಲೆಯನ್ನು ಹಾಕಿ ಕುದಿಸಿರಿ. ಇದಕ್ಕೆ,

2 ಚಮಚ ಚಹಾದ ಸೊಪ್ಪನ್ನು ಹಾಕಿ ಪುನಃ ಕುದಿಸಿ ಶೋಧಿಸಿ ನಂತರ ಈ ರಸವನ್ನು ಕೂದಲಿಗೆ ಲೇಪಿಸಿ ಅರ್ಧಗಂಟೆಯ ನಂತರ ಸ್ನಾನ ಮಾಡಿರಿ. (ಚಹದ ಸೊಪ್ಪಿನ ಬದಲು ಚಹಾಪುಡಿ ಬಳಸಿ).

ಹಸಿಗೂದಲನ್ನು ಬಾಚಬೇಡಿ, ಇದರಿಂದ ಕೂದಲು ತುಂಬಾ ಉದುರುತ್ತೆ. ತೊಡಕುಗಳನ್ನು ಕೈಯಿಂದ ಬಿಡಿಸಿ. ಬಾಚಣಿಕೆ ಪ್ರತಿನಿತ್ಯ ಉಪಯೋಗಿಸುತ್ತೇವೆ. ಅದನ್ನು ಕೊನೇ ಪಕ್ಷ ವಾರಕ್ಕೆ ಒಂದು ಬಾರಿಯಾದರು ಸೋಪ್‌ಪೌಡರ್ ಟೂಥ್ ಬ್ರಷ್ ಒಳಗೆ ಸ್ವಚ್ಛಗೊಳಿಸಬೇಕು.

ಹೊಟ್ಟಿನ ಸಮಸ್ಯೆ ಇರುವವರು 2 ದಿನಗಳಿಗೊಮ್ಮೆಯಾದರು ಬಾಚಣಿಕೆ ತೊಳೆಯಬೇಕು. ಮಂದಾರದ ಎಲೆಗಳನ್ನು ಚೆನ್ನಾಗಿ ರುಬ್ಬಿ, ತಲೆಗೆ ಹಚ್ಚಿ ಒಂದು ಗಂಟೆಯ ನಂತರ ತಲೆಸ್ನಾನ ಮಾಡಿದರೆ ಕೂದಲು ಉದುರುವುದಿಲ್ಲ,

ಒಬ್ಬೊಬ್ಬರ ತಲೆಯಲ್ಲೂ ಸುಮಾರು 1,60,000 ಕೂದಲುಗಳು, ಗಂಡಸರಿಗೆ ಸುಮಾರು 90,000 ಕೂದಲುಗಳು ಇರುತ್ತವೆ. ದಿನಕ್ಕೆ 50-60 ಕೂದಲು ಉಚ್ಚುವುದು ಸ್ವಾಭಾವಿಕ. ಅನಾರೋಗ್ಯದೇನು ಇಲ್ಲದೆ ವಿನಾಕಾರಣ ಕೂದಲು ಉಚ್ಚುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ.

ಅತಿ ಬಿಗಿಯಾಗಿ ಜಡೆ ಹೆಣೆಯಬಾರದು. ಚಿಕ್ಕ ಮಕ್ಕಳಿಗಂತೂ ಪ್ರತಿನಿತ್ಯ ಎಳ್ಳೆ ಹಚ್ಚುವುದರಿಂದ ಅವರ ಕೂದಲು ಚೆನ್ನಾಗಿ ಬೆಳೆಯುತ್ತವೆ ಮತ್ತು ಬೇಸಿಗೆಯಲ್ಲಿ ಎಣ್ಣೆಯಿಂದ ತಲೆ ತಂಪಾಗಿ ಇರುತ್ತದೆ.

ವಾರಕ್ಕೆ ಒಂದು ಬಾರಿ ಆಲಿವ್‌ ಆಯಿಲ್ ಕಾಯಿಸಿ ಅದನ್ನು ಲೇಪಿಸುವುದರಿ೦ದ ಕೂದಲು ಫಳಫಳ ಹೊಳೆಯುತ್ತವೆ. ತಲೆಗೂದಲಿಗೆ ಚಿಕ್ಕ ಮಕ್ಕಳಿಗೆ ಹೇನು ಜಾಸ್ತಿ, ಕೊಬ್ಬರಿ ಎಣ್ಣೆಯಲ್ಲಿ ಕರ್ಪೂರ ಪುಡಿ ಮಾಡಿ ಹಾಕಿ ಆ ಎಣ್ಣೆಯನ್ನು ಬಿಸಿ ಮಾಡಿ ತಲೆಗೆ ಹಚ್ಚಿ ಮರುದಿನ ಬೆಳಿಗ್ಗೆ ತಲೆಸ್ನಾನ ಮಾಡಿಸಿ. ಎಣ್ಣೆ ಹಚ್ಚಿದಾಗ ತಲೆ ಬಾಚಿ ಹೇನು ಹೊರಬೀಳುತ್ತವೆ.

ಎಣ್ಣೆಯಿಂದ ಚೆನ್ನಾಗಿ ತಲೆ ಮಹಾಜ್ ಮಾಡುವುದರಿಂದ ರಕ್ತಸಂಚಲನದಿಂದ ತಲೆಕೂದಲಿಗೆ ಒಳ್ಳೇ ಆರೋಗ್ಯ ದೊರಕಿದಂತಾಗುತ್ತದೆ. ವಾರಕ್ಕೆ ಒಂದು ಬಾರಿಯಾದರು ತಲೆಗೆ ಮಸಾಜ್ ಮಾಡಿರಿ.

Men hair care tips in Kannada

ಐರನ್, ವಿಟಮಿನ್ ಬಿ,ಎ, ಅಯೋಡಿನ್ ಎಲ್ಲವೂ ಕೂದಲಿಗೆ ಅತ್ಯವಶ್ಯಕ ಇದರಿಂದ ಕೂದಲು ಚೆನ್ನಾಗಿ ಇರುತ್ತವೆ. ಇವುಗಳನ್ನು ಒದಗಿಸುವಂತಹ ಆಹಾರವನ್ನು ಸೇವಿಸಬೇಕು. ಒಂದು ಬಟ್ಟಲು ಹಾಲಿಗೆ ನಾಲ್ಕು ಚಮಚ ಕೊಬ್ಬರಿ ಎಣ್ಣೆ ಬೆರೆಸಿ ತಲೆಯ ಕೂದಲಿಗೆ ಹಚ್ಚಿ ಬಿಸಿಯಾದ ನೀರಿನಲ್ಲಿ ಅದ್ದಿದ ಟವಲನ್ನು ತಲೆಗೆ ಸುತ್ತಿ.

ಈ ರೀತಿ 10-12 ಸಾರಿ ಬಿಸಿನೀರಿನ ಶಾಖ ಕೊಟ್ಟು ಆನ೦ತರ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ ಮತ್ತು ಸೊಂಪಾಗಿ ಬೆಳೆಯುತ್ತವೆ.

ಬಾದಾಮಿ ಎಣ್ಣೆ ಕೂದಲಿಗೆ ತುಂಬಾ ಒಳ್ಳೆಯದು. ವಾರಕ್ಕೆ ಒಂದು ಬಾರಿ ತಲೆಗೆ ಮಹಾಜ್ ಮಾಡಿದರೆ ಕೂದಲು ಚೆನ್ನಾಗಿ ಬೆಳೆಯುತ್ತದೆ.

ಕಾಲು ಕಪ್ ಮೊಸರು, ಅರ್ಧ ಟೀ ಚಮಚ ಕಡಲೇಹಿಟ್ಟು, ಒಂದು ಟೀ ಚಮಚ ಆಲಿವ್ ಆಯಿಲ್‌, ಅರ್ಧ ಟೀ ಚಮಚ ನಿಂಬೆರಸ ಹಚ್ಚುವುದರಿಂದ ಕೂದಲಿನ ಕಾಂತಿ ಹೆಚ್ಚುತ್ತದೆ. ಜೊತೆಗೆ ಉದುರುವುದು ಕಡಿಮೆಯಾಗುತ್ತವೆ.

ಕೊಬ್ರಿ ಎಣ್ಣೆಯಲ್ಲಿ ಕರಿಬೇವಿನ ಎಲೆಗಳನ್ನು ಹಾಕಿ ಕಾಯಿಸಿ ತಲೆಗೆ ಎಣ್ಣೆ ಬಳಸಿದಾಗ ಅದನ್ನೇ ಬಳಸಿದರೆ ಕೂದಲು ಕಪ್ಪಾಗಿ ಆರೋಗ್ಯಕರವಾಗಿ ಇರುತ್ತದೆ. ಹೇರ್‌ಸ್ಟೇ, ಜೆಲ್, ಡೈ, ಕಲರ್ ಇವೆಲ್ಲವನ್ನು ಅತಿಯಾಗಿ ಉಪಯೋಗಿಸಬಾರದು.

ಮೆಂತೆ ಪುಡಿಗೆ ಸ್ವಲ್ಪ ನೀರು ಹಾಕಿ ಒಂದು ರಾತ್ರಿ ನೆನಸಿ ಮರುದಿನ ಸ್ವಲ್ಪ ಮೊಸರು ಬೆರಸಿ ತಲೆಗೆ ಹಚ್ಚಿ ಅರ್ಧ ಗಂಟೆ ಬಳಿಕ ಕೂದಲು ತೊಳೆದರೆ ತಲೆಹೊಟ್ಟು ಹೋಗುವುದು, ಕೂದಲೂ ಬೆಳೆಯಲು ಅನುಕೂಲವಾಗುವುದಲ್ಲದೆ ದೇಹಕ್ಕೆ ತಂಪನ್ನು ನೀಡುತ್ತದೆ. ಸಿಗರೇಟ್ ಸೇದುವುದು, ಚಿಂತೆ ಇವರು ಕೂದಲಿನ ವೈರಿ. ಅವುಗಳಿಂದ ಕೂದಲು ಉದುರುತ್ತದೆ.

ನಲ್ಲಿ (ಬೆಟ್ಟದ ನೆಲ್ಲಿಕಾಯಿ) Amla ರುಬ್ಬಿ ಕೂಡಲಿಗೆ ಲೇಪಿಸುವುದರಿಂದ ಬಿಳಿ ಕೂದಲು ಬರುವುದನ್ನು ತಡೆಗಟ್ಟಬಹುದು. ಕೂದಲನ್ನು ಹರಡಿಕೊಂಡು ಬಿಸಿಲಿಗೆ ಹೋದರೆ ಕೂದಲು ಒಡೆಯುತ್ತವೆ (ಸ್ಟ್ರೀಟ್)

ಆಗುತ್ತವೆ. ರುಬ್ಬಿದ ಮೆಂತೆಯನ್ನು ಕೂದಲಿಗೆ ಲೇಪಿಸಿ ನಂತರ ತಲೆ ತೊಳೆಯುವುದರಿಂದ ಕೂದಲು ಉದುರುವುದು ಮತ್ತು ಹೊಟ್ಟು ಕಡಿಮೆಯಾಗುತ್ತದೆ. 1 ನಿಂಬೆಗೆ 1 ಟೇಬಲ್ ಚಮಚ ನೀರನ್ನು ಬೆರಸಿ ತಲೆಗೆ ಹಚ್ಚಿ ನಂತರ ತಲೆ ತೊಳೆದುಕೊಳ್ಳುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ, ಈ ರೀತಿ ವಾರಕ್ಕೆ 2 ಬಾ ಮಾಡಬೇಕು.

50 ಗ್ರಾಂ ಎಣ್ಣೆಗೆ 1 ಚಮ, ಮಂಡ್ಯದ ಪಡಿ ಬೆರೆಸಿ, ಮಸಾಜ್ ಮಾಡಿ ಹೊಟ್ಟು ಮಾಯವಾಗುತ್ತದೆ. ತಲೆಗೂದಲು ಸೀಳು ಸೀಳಾಗಿ ಒಣಗಿದ್ದರೆ ಮತ್ತು ಕಾಂತಿಹೀನವಾಗಿದ್ದರೆ, ಒಂದು ಮೊಟ್ಟೆಯ ಹಳದಿ ಭಾಗವನ್ನು ಒಂದು ಚದುಚ ಬಾದಾಮಿ ಎಣ್ಣೆ ಬೆರೆಸಿ ಕೂದಲಿಗೆ ಲೇ ನಂತರ ತಲೆ ತೊಳೆಯುವುದರಿಂದ ಕೂದಲು ಉದುರುವಕೆ ಕಡಿಮೆಯಾಗುತ್ತದೆ.

ಆರು ಚಮಚ ನೆಲ್ಲಿಕಾಯಿ ಪುಡಿ, 4 ಚಮಚ ಮೊಸರು, 4 ಚಮಚ ನಿಂಬೆರಸ, ಚಮಚ ಹಾಲು ಎಲ್ಲಾ ಬೆರೆಸಿ ಈ ಮಿಶ್ರಣವನ್ನು ತಲೆಗೆ ಪಟ್ಟಿ 40 ಸಮೀಜಿಗಳು ಸೇರಿ ಇದರಿಂದ ತಲೆಹೊಟ್ಟು, ಕೂದಲುದುರುವಿಕೆ ಕಡಿಮೆಯಾಗಿ ಇರುತ್ತದೆ.

ಮೆಹೆಂದಿ ಪುಡಿ

1 ದೊಡ್ಡ ಲೋಟ ನೀರಿಗೆ 2 ಟೇಬಲ್ ಚಮಚ ಟೀ ಪುಡಿ ಹಾಕಿ ಚೆನ್ನಾಗಿ ಕುದಿಸಿ ನಂತರ ಶೋಧಿಸಿ ಅದು ಉಗುರು ಬೆಚ್ಚಗೆ ಆದಾಗ ಅದರಲ್ಲಿ ಮೆಹೆಂದಿ ಪುಡಿ, 2 ನಿಂಬೆರಸ, 2 ಟೇಬಲ್ ಚಮಚ ಮೊಸರು, ಚೆನ್ನಾಗಿ ಬೆರಸಿ 4 ಟೇಬಲ್ ಚಮಚ ಕೊಬ್ರಿ ಎಣ್ಣೆ ಹಾಕಿ ಕಲಸಿ ರಾತ್ರಿಯೇ ನೆನಸಿ ಮರುದಿವಸ ಬೆಳಿಗ್ಗೆ ಕೂದಲಿಗೆ ಲೇಪಿಸಿ 2 ಗಂಟೆಯ ನಂತರ ತಲೆಸ್ನಾನ ಮಾಡಿರಿ, ಈ ರೀತಿ ಪ್ರತಿ ತಿಂಗಳು ಮಾಡಿರಿ,

ಮೆಹೆಂದಿ ಲೇಪಿಸಿ ಬಹಳ ಹೊತ್ತು ಬಿಟ್ಟರೆ ಬುಡಗಳಿಗೆ ಉಸಿರಾಡದಂತಾಗುತ್ತದೆ.

ಕಲರ್ ಮತ್ತು ಕಂಡೀಷನ್‌ಗಾಗಿ ಮೆಹೆಂದಿ

Hair growth tips in Kannada
Hair growth tips in Kannada

1 ಲೋಟ ನೀರಿನಲ್ಲಿ 2 ಟೇಬಲ್‌ ಚಮಚ ಚಹಾಪುಡಿ ಹಾಕಿ ಕುದಿಸಿ ಕಬ್ಬಿಣದ ಬಾಣಲೆಯಲ್ಲಿ ಹಾಕಿ ಅದಕ್ಕೆ ಮೆಹೆಂದಿ ಪುಡಿ ಹಾಕಿ, 1 ಟೇಬಲ್ ಚಮಚ ಅಮ್ಮ (ನೆಲ್ಲಿಕಾಯಿಪುಡಿ) 1 ಟೇಬಲ್ ಚಮಚ ಕಾಫಿ ಪುಡಿ ಹಾಕಿ ಬೆರೆಸಿ ಮರುದಿವಸ ಬೆಳಿಗ್ಗೆ 2 ಮೊಟ್ಟೆಯ ಬಿಳಿಭಾಗವನ್ನು ಹಾಕಿ ಚೆನ್ನಾಗಿ ಕಲಸಿ ತಲೆಗೆ ಹಚ್ಚಿ 2 ಗಂಟೆ ನೆನಸಿ ನಂತರ ತಲೆಸ್ನಾನ ಮಾಡಿ, ಅಂದಿನ ದಿನ ಶಾಂಪೂ ಹಾಕಬೇಡಿ.

ಈ ರೀತಿ ಮೂರು ತಿಂಗಳಿಗೊಮ್ಮೆ ಮಾಡುವುದರಿಂದ ಕಲರ್ ಬರುತ್ತೆ ಮತ್ತು ಕೂದಲು ಆರೋಗ್ಯಕರವಾಗಿ ಇರುತ್ತದೆ.

ಹೇರ್ ಡೈ  ಬಳಸುವವರು

Hair tips in Kannada
Hair tips in Kannada

ಹೇರ್ ಡೈಗಿಂತಲೂ ಮೆಹೆಂದಿಯ ರಂಗು ನೀಡುವುದು ಒಳ್ಳೆಯದು. ಒಂದು ವೇಳೆ ಡೈ ಮಾಡಬೇಕೆಂದರೆ ಪಾರ್ಲ‌್ರಗಳಲ್ಲಿನ ಹರ್ಬಲ್ ಡೈ ಬಳಸಿ, ನೀವು ಮಾರ್ಕೆಟ್‌ನಲ್ಲಿ ದೊರೆಯುವ ಡೈ ಬಳಸುವುದಾದರೆ ಕೆಲವು ಜಾಗ್ರತೆಗಳನ್ನು ವಹಿಸಬೇಕು. ಬ್ರಷ್‌ನಿಂದ ಹಚ್ಚಿಕೊಳ್ಳಬೇಕು.

ಒಳ್ಳೇ ಗುಣಮಟ್ಟದ ಡೈ ಬಳಸಿ, ಮೊದಲು ಸ್ಕಿನ್ ಟೆಸ್ಟ್ ಮಾಡಿಕೊಳ್ಳಿ, ಸ್ವಲ್ಪ ಡೈ ಕಲಸಿ ಕಿವಿಯ ಹಿಂದೆ ಇಲ್ಲ ಸ್ವಲ್ಪ ತಲೆಗೆ ಒಂದು ಭಾಗದಲ್ಲಿ ಹಚ್ಚಿ. ನಿಮ್ಮ ಚರ್ಮದಲ್ಲಿ ಯಾವ ವ್ಯತ್ಯಾಸವು ಕಾಣದಿದ್ದರೆ ಡೈ ಬಳಸಿ, ಪ್ರತಿ ಸಾರಿ ನೀವು ಡೈ ಮಾಡುವುದಕ್ಕೆ 3 ತಿಂಗಳ ಅಂತರವಾದರು ಇರಬೇಕು, ಡೈ ಪ್ಲಾಸ್ಟಿಕ್ ಕಪ್‌ನಲ್ಲಿ ಕಲಿಸಬೇಕು. ಬ್ರಷ್‌ನಿಂದ ಹಚ್ಚಬೇಕು.

ಡೈ ಹಚ್ಚಿಕೊಳ್ಳುವಾಗ ಕೈಗಳಿಗೆ ಗೌಸ್ ಹಾಕಬೇಕು.

ಕೇಸರಿ ಡೈ – 1 ಚಿಟಿಕೆ ಕೇಸರಿ, ಕುದಿಯುವ ನೀರು – 500 MI ಕೇಸರಿಯನ್ನು 10 ನಿಮಿಷ ನೀರಿನಲ್ಲಿ ನೆನಸಿ ನಂತರ ಶೋಧಿಸಿ ಕೂದಲಿಗೆ ಲೇಪಿಸಿ ಬಿಳಿಗೂದಲಿಗೆ ಬಂಗಾರದ ಬಣ್ಣ ಬರುತ್ತದೆ.

Before you leave,

Also read : Pimples on face removal tips in kannada 

Leave a Comment

error: Content is protected !!