ಮೂತ್ರಪಿಂಡದ ಕಲ್ಲುಗಳಿಗೆ ನಿವಾರಣೆಯ ಮನೆಮದ್ದು

ಕಿಡ್ನಿಗಳು ಮನುಷ್ಯನ ದೇಹದಲ್ಲಿ ಅತಿ ಮುಖ್ಯ ಅಂಗಗಳಾಗಿವೆ. ಸಾಮಾನ್ಯವಾಗಿ ಹೊಟ್ಟೆಯ ಕೆಳಭಾಗದಲ್ಲಿ ಹಿಂದೆ ಸ್ಥಾಪಿತ ವಾಗಿರುವ ಕಿಡ್ನಿಗಳು ದೇಹದಲ್ಲಿ ಎರಡು ಬಹಳ ಮುಖ್ಯವಾದ ಕಾರ್ಯಗಳನ್ನು ಮಾಡುತ್ತವೆ.

ಮೊದಲನೆಯದಾಗಿ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುವುದು. ಎರಡನೆಯದಾಗಿ ದೇಹದಲ್ಲಿ ನೀರಿನ ಅಂಶದ ಮಟ್ಟವನ್ನು ಜೊತೆಗೆ ಇತರೆ ದ್ರವಗಳ ಅಂಶಗಳನ್ನು, ರಾಸಾಯನಿಕ ಮತ್ತು ಖನಿಜಾಂಶಗಳನ್ನು ಸಮತೋಲನಗೊಳಿಸುತ್ತದೆ.

ಮೂತ್ರ ಪಿಂಡಗಳು ತಮಗೆ ಒದಗಿಸಲ್ಪಡುವ ರಕ್ತದಲ್ಲಿ ಸೇರಿರುವ ಹಲವಾರು ಪೌಷ್ಟಿಕ ಸತ್ವಗಳನ್ನು ಹೀರಿಕೊಂಡು ಉಳಿಕೆಯ ಅನಗತ್ಯ ದ್ರವವನ್ನು ಮೂತ್ರದ ರೀತಿಯಲ್ಲಿ ಹೊರ ಹಾಕುತ್ತದೆ. ಒಬ್ಬ ಮನುಷ್ಯನ ಆರೋಗ್ಯಕರ ಜೀವನಕ್ಕೆ ಎರಡೂ ಕಿಡ್ನಿಗಳು ಅವಶ್ಯವಾದರೂ ಕೇವಲ ಒಂದು ಕಿಡ್ನಿಯ ಸಹಾಯದಲ್ಲಿ ಚೆನ್ನಾಗಿಯೇ ಬದುಕಬಹುದು.

ತಾನು ತಿನ್ನುವ ಅನೇಕ ಬಗೆಯ ಆಹಾರಗಳಲ್ಲಿ ಇರುವ ಸತ್ವಗಳನ್ನು ಮನುಷ್ಯನ ದಿನ ನಿತ್ಯದ ದೈಹಿಕ ಚಟುವಟಿಕೆಗೆ ಪೂರಕವಾಗುವಂತೆ ಶಕ್ತಿಯನ್ನಾಗಿ ಬದಲಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಅನೇಕ ವಿಷಕಾರಿ ಅಂಶಗಳೂ ಸಹ ಉತ್ಪತ್ತಿಯಾಗುತ್ತವೆ ಮತ್ತು ಇವು ದೇಹದಲ್ಲಿ ಸೇರಿಕೊಂಡರೆ ಮನುಷ್ಯನಿಗೆ ಬಹಳ ತೊಂದರೆ ಆಗುತ್ತದೆ.

ಇವುಗಳಿಂದ ಮತ್ತು ಕಡಿಮೆ ನೀರಿನ ಸೇವನೆಯಿಂದ ಕಿಡ್ನಿಗಳಲ್ಲಿ ಕಲ್ಲುಗಳ ರೂಪದ ಘನ ವಸ್ತುಗಳು ಉತ್ಪತ್ತಿಯಾಗುತ್ತವೆ. ಇವುಗಳು ಗಾತ್ರದಲ್ಲಿ ಸಣ್ಣ ಕಾಳಿನ ರೀತಿಯಿಂದ ಒಂದು ಗಾಲ್ಫ್ ಚೆಂಡಿನ ವರೆಗೂ ದಪ್ಪವಾಗಿ ರೂಪುಗೊಂಡಿರುತ್ತವೆ. ಈ ಘನ ವಸ್ತುಗಳು ” ಕ್ಯಾಲ್ಸಿಯಂ ಆಕ್ಸಲೇಟ್ ” ಎಂಬ ಅಂಶದಿಂದ ಉತ್ಪತ್ತಿಯಾಗಿರುತ್ತವೆ.

ಈ ರೀತಿಯ ಕಲ್ಲುಗಳ ಉತ್ಪತ್ತಿಯಿಂದ ಮೂತ್ರ ವಿಸರ್ಜನೆಯಲ್ಲಿ ತೊಂದರೆ ಉಂಟಾಗಿ ದೇಹದ ತೂಕ ಕಡಿಮೆ ಆಗುವುದು, ಜ್ವರದ ಲಕ್ಷಣ ಕಾಣಿಸುವುದು,ವಾಕರಿಕೆಯ ಅನುಭವ ಉಂಟಾಗುವುದು, ಹಿಮಚ್ಯುರಿಯಾ ಮತ್ತು ಕಿಬ್ಬೊಟ್ಟೆಯಲ್ಲಿ ವಿಪರೀತ ನೋವು ಬಂದಂತಹ ಅನುಭವ ಉಂಟಾಗುತ್ತದೆ. ಕಿಡ್ನಿ ಕಲ್ಲುಗಳನ್ನು ಸರ್ಜರಿಯ ಮುಖಾಂತರ ತೆಗೆಯಲಾಗುತ್ತದೆ. ಆದರೆ ಯಾವುದೇ ಸರ್ಜರಿ ಇಲ್ಲದೆ ಕಿಡ್ನಿ ಕಲ್ಲುಗಳನ್ನು ಮನೆಯಲ್ಲಿಯೇ ಕರಗಿಸಬಹುದಾದ ಕೆಲವು ಸುಲಭ ಮಾರ್ಗಗಳು ಈ ಕೆಳಗಿನಂತಿವೆ.

ದಾಳಿಂಬೆ ಹಣ್ಣು (Pomegranate)

ದಾಳಿಂಬೆ ಹಣ್ಣು ಹಲವಾರು ಬಗೆಯ ಪೌಷ್ಟಿಕ ಅಂಶಗಳನ್ನು ತನ್ನಲ್ಲಿ ಅಡಕ ಮಾಡಿಕೊಂಡಿರುವ ಒಂದು ಬಹು ವಿಧದಲ್ಲಿ ಉಪಯೋಗಕ್ಕೆ ಬರುವ ಆರೋಗ್ಯಕರವಾದ ಹಣ್ಣಾಗಿದೆ. ದಾಳಿಂಬೆ ಹಣ್ಣಿನ ರಸ ಕೂಡ ಮನುಷ್ಯನ ದೇಹದಲ್ಲಿ ಸದಾ ನೀರಿನಂಶವನ್ನು ಕಾಪಾಡುವ ಒಂದು ಅದ್ಭುತ ನೈಸರ್ಗಿಕ ಪಾನೀಯವಾಗಿದೆ.

ಕಿಡ್ನಿಯಲ್ಲಿನ ಕಲ್ಲುಗಳನ್ನು ಕರಗಿಸುವಲ್ಲಿ ಇದು ಬಹು ಮುಖ್ಯ ಪಾತ್ರ ವಹಿಸುತ್ತದೆ. ಏಕೆಂದರೆ ಇದರಲ್ಲಿ ಆಂಟಿ ಆಕ್ಸಿಡೆಂಟ್ ಗಳು ಬಹಳಷ್ಟಿದ್ದು ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ.

ಹಸಿಶುಂಠಿ (Ginger)

ಹಸಿಶುಂಠಿ ಮೂತ್ರಪಿಂಡಗಳನ್ನು ಶುದ್ಧೀಕರಿಸಲು ಶುಂಠಿ ಸಹಾ ಉತ್ತಮವಾದ ಮೂಲಿಕೆಯಾಗಿದೆ. ಬರೆಯ ಮೂತ್ರಪಿಂಡಗಳು ಮಾತ್ರವಲ್ಲ, ಜೀರ್ಣಾಂಗ ಮತ್ತು ಕರುಳುಗಳಿಂದಲೂ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ಯಕೃತ್ ಸಹಾ ಇದರಿಂದ ಶುದ್ಧಗೊಳ್ಳುತ್ತದೆ. ಇದಕ್ಕಾಗಿ ಹೆಚ್ಚೇನೂ ಮಾಡಬೇಕಾಗಿಲ್ಲ, ದಿನದಲ್ಲಿ ಕುಡಿಯುವ ಟೀ ಯಲ್ಲಿ ಕೊಂಚ ಶುಂಠಿಯನ್ನು ಸೇರಿಸಿದರೆ ಸಾಕು. ಉತ್ತಮ ಪರಿಣಾಮಕ್ಕಾಗಿ ಶುಂಠಿ ಕುದಿಸಿ ಸೋಸಿ ತಣಿಸಿದ ನೀರನ್ನು ರಾತ್ರಿ ಮಲಗುವ ಮುನ್ನ ಕುಡಿಯಿರಿ.

ಮೆಂತೆ ಕಾಳು

ಒಂದು ಚಮಚ ಮೆಂತೆಯನ್ನು ಒಂದು ಲೋಟ ನೀರಿನಲ್ಲಿ ನೆನೆ ಹಾಕಿ ಬೆಳ್ಳಗ್ಗೆ ತಿನ್ನಬೇಕು. ಈ ರೀತಿ ಮಾಡಿದರೆ ಕಿಡ್ನಿಯಲ್ಲಿರುವ ಕಲ್ಲು ಮಾತ್ರವಲ್ಲ ದೇಹದಲ್ಲಿರುವ ಕಲ್ಮಶಗಳನ್ನು ತೊಡೆದು ಹಾಕಲು ಸಹಕಾರಿಯಾಗಿದೆ. ಇನ್ನೊಂದು ವಿಧಾನವೆಂದರೆ ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳ ಕಾಲ ಮೆಂತೆ ನೆನೆಸಿದ ನೀರನ್ನು ಕುಡಿಯಿರಿ. ಇದು ಕಿಡ್ನಿಯಲ್ಲಿ ಕಲ್ಲನ್ನು ಹೊರಹಾಕಲು ನೆರವಾಗುವುದು.

ನಿಂಬೆ ಹಣ್ಣಿನ ರಸ ಮತ್ತು ಆಲಿವ್ ಆಯಿಲ್ (lemon & olive oil)

ನಿಂಬೆ ಹಣ್ಣಿನ ರಸದ ಜೊತೆ ಆಲಿವ್ ಆಯಿಲ್ ನ ಮಿಶ್ರಣ ಕೇಳುವುದಕ್ಕೆ ಸ್ವಲ್ಪ ವಿಚಿತ್ರವೆನಿಸಿದರೂ, ಕಿಡ್ನಿಯಲ್ಲಿನ ಕಲ್ಲುಗಳ ಕರಗಿಸುವಿಕೆಯಲ್ಲಿ ಇದರ ಪ್ರಯೋಜನಗಳು ಮಾತ್ರ ಅಪಾರ. ಇದೊಂದು ನೈಸರ್ಗಿಕವಾದ ಮನೆ ಮದ್ದಾಗಿದ್ದು, ಯಾರು ತಮ್ಮ ಕಿಡ್ನಿ ಕಲ್ಲುಗಳನ್ನು ಸುಲಭ ವಿಧಾನಗಳನ್ನು ಉಪಯೋಗಿಸಿ ಕರಗಿಸಲು ಇಚ್ಛೆ ಪಡುತ್ತಾರೋ ಅಂತಹವರು ಈ ಮಾರ್ಗವನ್ನು ಸುಲಭವಾಗಿ ಅನುಸರಿಸಬಹುದು.

ಉತ್ತಮ ಫಲಿತಾಂಶಕ್ಕಾಗಿ ನಿಂಬೆ ಹಣ್ಣಿನ ರಸ ಮತ್ತು ಆಲಿವ್ ಆಯಿಲ್ ನ ಮಿಶ್ರಣವನ್ನು ಪ್ರತಿ ದಿನ ಕಿಡ್ನಿ ಕಲ್ಲುಗಳು ಕರಗುವವರೆಗೂ ಸೇವಿಸಿದರೆ ಒಳ್ಳೆಯದು. ಇಲ್ಲಿ ನಿಂಬೆ ಹಣ್ಣಿನ ರಸ ಕಿಡ್ನಿ ಕಲ್ಲುಗಳನ್ನು ಚೂರು ಮಾಡುವುದಕ್ಕೆ ಸಹಾಯ ಮಾಡಿದರೆ ಆಲಿವ್ ಆಯಿಲ್ ಒಂದು ಲ್ಯೂಬ್ರಿಕೆಂಟ್ ನ ರೀತಿಯಲ್ಲಿ ಕೆಲಸ ಮಾಡಿ ಕರಗಿದ ಕಿಡ್ನಿ ಕಲ್ಲುಗಳು ಯಾವುದೇ ಕಿರಿಕಿರಿ ಅಥವಾ ಸಮಸ್ಯೆ ಇಲ್ಲದೆ ಕಿಡ್ನಿಗಳಿಂದ ಹೊರ ಹೋಗುವಂತೆ ಮಾಡುತ್ತದೆ.

ಎಳನೀರು(Coconut water)

Coconut with straw on the floor

ನಮ್ಮ ದೇಹಕ್ಕೆ ಅತ್ಯುತ್ತಮವಾದ ದ್ರವವಾಗಿರುವ ಎಳನೀರು ಮೂತ್ರಪಿಂಡಗಳ ಕಲ್ಲು ನಿವಾರಿಸಲು ಹಾಗೂ ನೋವು ಇಲ್ಲದಂತಾಗಿಸಲೂ ನೆರವಾಗುತ್ತದೆ. ಪ್ರತಿದಿನ ಖಾಲಿಹೊಟ್ಟೆಯಲ್ಲಿ ಒಂದು ಎಳನೀರು ಕುಡಿಯುವ ಮೂಲಕ ಕಲ್ಲುಗಳು ಕರಗಲು ಸಾಧ್ಯವಾಗುತ್ತದೆ.

ವಿಧಾನ:

ಖಾಲಿಹೊಟ್ಟೆಯಲ್ಲಿ ಒಂದು ಎಳನೀರು ಕುಡಿದ ಬಳಿಕ ದಿನದಲ್ಲಿ ಸುಮಾರು ನಾಲ್ಕರಿಂದ ಐದು ಎಳನೀರನ್ನಾದರೂ ಊಟಕ್ಕೆ ಅರ್ಧ ಗಂಟೆಗೆ ಮುನ್ನ ಕುಡಿಯಬೇಕು. ರಾತ್ರಿ ಮಲಗುವ ಮುನ್ನವೂ ಒಂದು ಎಳನೀರು ಕುಡಿದು ಕೊಂಚಕಾಲ ಅಡ್ಡಾಡಿ ಬಳಿಕ ಮೂತ್ರ ವಿಸರ್ಜಿಸಿ ಮಲಗಿಕೊಳ್ಳಬೇಕು.

ಅತಿಯಾದ ನೀರು ಸೇವನೆ ಅತ್ಯಗತ್ಯ (Excess water intake)

ಮನುಷ್ಯನ ದೇಹಕ್ಕೆ ಅವಶ್ಯವಿರುವ ಪಂಚಭೂತಗಳಲ್ಲಿ ನೀರು ಕೂಡ ಒಂದು. ದೇಹದ ಒಳಗೆ ದ್ರವವನ್ನು ಸಮತೋಲನ ಮಾಡಲು ನೀರು ಬಹಳ ಅವಶ್ಯಕ. ಅಲ್ಲದೆ ದೇಹದ ಒಳಗಿರುವ ಅಂಗಗಳು ಕೆಲಸ ಮಾಡುವುದು ನೀರಿನ ಅಂಶದಿಂದಲೇ. ನೀರು ಕಿಡ್ನಿಗಳಿಗೆ ನಾವು ಸೇವಿಸುವ ಆಹಾರದಲ್ಲಿ ಇರುವ ಖನಿಜಾಂಶಗಳು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ಸಹಾಯ ಮಾಡಿ ಜೀರ್ಣಕ್ರಿಯೆಯನ್ನು ವೃದ್ಧಿಗೊಳಿಸುತ್ತದೆ.

ನೀರು ದೇಹದಿಂದ ಅವಶ್ಯವಿಲ್ಲದ ವಿಷಕಾರಿ ಅಂಶಗಳನ್ನು ಕಿಡ್ನಿಗಳಿಗೆ ಭವಿಷ್ಯದಲ್ಲಿ ಯಾವುದೇ ತೊಂದರೆಯಾಗದಂತೆ ಹೊರಗೆ ಕಳಿಸುತ್ತದೆ. ಯಾರಿಗೆ ಕಿಡ್ನಿ ಕಲ್ಲುಗಳ ಸಮಸ್ಯೆ ಇದೆಯೋ ಅವರು ತುಂಬಾ ಹೆಚ್ಚಾಗಿ ನೀರು ಕುಡಿಯಬೇಕು.

ಸಾಮಾನ್ಯವಾಗಿ ವೈದ್ಯರ ಸಲಹೆಯಂತೆ ಒಂದು ದಿನಕ್ಕೆ 7 – 8 ಲೋಟಗಳಷ್ಟು ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಕಿಡ್ನಿ ಕಲ್ಲುಗಳನ್ನು ಕರಗಿಸಿ ಮೂತ್ರದ ಮುಖಾಂತರ ಹೊರ ಹಾಕಬಹುದು. ಇದು ಯಾವುದೇ ಖರ್ಚಿಲ್ಲದೆ ಮಾಡುವ ಅತ್ಯಂತ ಸುಲಭ ವಿಧಾನವಲ್ಲವೇ?

ಆಪಲ್ ಸೈಡರ್ ವಿನೆಗರ್ (Apple cidar vinegar)

apple cider vinegar

ಆಪಲ್ ಸೈಡರ್ ವಿನೆಗರ್ ನಲ್ಲಿ ಸಿಟ್ರಿಕ್ ಆಮ್ಲ ದ ಅಂಶ ಇದ್ದು ಕಿಡ್ನಿ ಕಲ್ಲುಗಳನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಪರಿವರ್ತಿಸಿ ಅವುಗಳನ್ನು ಕರಗಿಸುವಲ್ಲಿ ಸಹಾಯ ಮಾಡುತ್ತದೆ. ಮನುಷ್ಯನ ಮೂತ್ರ ಜನಕಾಂಗದ ಮೂಲಕ ಕಿಡ್ನಿ ಕಲ್ಲುಗಳು ಸುಲಭವಾಗಿ ಹೊರಗೆ ಹೋಗುವಂತೆ ಮಾಡುತ್ತದೆ. ಆಪಲ್ ಸೈಡರ್ ವಿನೆಗರ್ ನ ಸೇವನೆ ದೇಹದಲ್ಲಿನ ವಿಷಕಾರಿ ಅಂಶಗಳಿಗೆ ರಾಮಬಾಣವಾಗಿ ನಮ್ಮ ಕಿಡ್ನಿಗಳನ್ನು ಸಹ ಸ್ವಚ್ಛವಾಗಿರುತ್ತದೆ. 2 ಟೇಬಲ್ ಚಮಚದಷ್ಟು ಆಪಲ್ ಸೈಡರ್ ವಿನಿಗರ್ ಅನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಿದರೆ ಕಿಡ್ನಿಯಲ್ಲಿ ಕಲ್ಲುಗಳ ಸಂಪೂರ್ಣವಾಗಿ ದೇಹದಿಂದ ಹೊರ ನಡೆಯುತ್ತವೆ. ಆದ್ದರಿಂದ ಕಿಡ್ನಿ ಕಲ್ಲುಗಳು ಕರಗುವವರೆಗೂ ಈ ಪ್ರಕ್ರಿಯೆಯನ್ನು ಮುಂದುವರಿಸಿ.

ತುಳಸಿ ಎಲೆಗಳು (Tulasi Leaves)

ಸಾಮಾನ್ಯವಾಗಿ ಮೂತ್ರದ ಯಾವುದೇ ತೊಂದರೆಗೆ ತುಳಸಿ ಉತ್ತಮವಾಗಿದೆ. ಶೀತದಿಂದ ಹಿಡಿದು ಜ್ವರ, ಶ್ವಾಸ, ಮೂತ್ರಪಿಂಡಗಳ ಕಲ್ಲಿಗೂ ಉತ್ತಮವಾಗಿದೆ. ತುಳಸಿಯಲ್ಲಿರುವ ಮೂತ್ರವರ್ಧಕ ಗುಣ ಮತ್ತು ಕಲ್ಮಶ ನಿವಾರಕ ಗುಣ ಮೂತ್ರಪಿಂಡಗಳ ಕಲ್ಲುಗಳನ್ನು ಹೊರಹಾಕಲು ಸಮರ್ಥವಾಗಿವೆ.

ತುಳಸಿ ಎಲೆಗಳ ರಸದಲ್ಲಿ ಅಸೆಟಿಕ್ ಆಮ್ಲವಿದ್ದು ಈ ಆಮ್ಲದಲ್ಲಿ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ. ಕಲ್ಲುಗಳು ಕರಗುತ್ತಾ ಹೋದಂತೆ ನೋವು ಸಹಾ ಕಡಿಮೆಯಾಗುತ್ತದೆ.

ವಿಧಾನ:

ನಾಲ್ಕಾರು ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು ಕೊಂಚ ಜೇನಿನೊಂದಿಗೆ ಬೆರೆಸಿ ಪ್ರತಿದಿನ ಜಗಿದು ತಿನ್ನುವ ಮೂಲಕ ಕಲ್ಲುಗಳು ನಿಧಾನವಾಗಿ ಕರಗುತ್ತಾ ಹೋಗುತ್ತವೆ.

ಮುಸುಕಿನ ಜೋಳದ ನಾರು ಅಥವಾ ಮುಸುಕಿನ ಕೂದಲು

ಇದು ಸಾಮಾನ್ಯವಾಗಿ ಮುಸುಕಿನ ಜೋಳದ ಸುತ್ತಲೂ ರಕ್ಷಾ ಕವಚವಾಗಿ ಕೂದಲಿನ ತರಹ ಉದ್ದವಾಗಿ ಸಿಪ್ಪೆಯ ಒಳಗಡೆ ಮುಸುಕಿನ ಜೋಳದ ತುದಿಯಲ್ಲಿ ಬೆಳೆದಿರುತ್ತದೆ. ಇದರ ಮಹತ್ವ ಗೊತ್ತಿಲ್ಲದೆ ನಾವು ಕೇವಲ ಜೋಳವನ್ನು ಉಪಯೋಗಿಸಿಕೊಂಡು ಈ ನಾರನ್ನು ಹೊರಗೆ ಬಿಸಾಡುತ್ತೇವೆ.

ಹಲವಾರು ಸಂಶೋಧನೆಗಳ ಮುಖಾಂತರ ಸಂಶೋಧಕರು ಮುಸುಕಿನ ಜೋಳದ ನಾರು ಕಿಡ್ನಿ ಕಲ್ಲುಗಳನ್ನು ಕರಗಿಸುವಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಸಾಬೀತು ಮಾಡಿದ್ದಾರೆ.

ಈ ನಾರನ್ನು ಉತ್ತಮ ಫಲಿತಾಂಶಕ್ಕಾಗಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರನ್ನು ಸೋಸಿ ನಂತರ ಸೇವಿಸಬೇಕು. ಈ ನೀರನ್ನು ಕುಡಿಯುವುದರಿಂದ ಭವಿಷ್ಯದಲ್ಲಿ ಉಂಟಾಗುವ ಕಿಡ್ನಿ ಕಲ್ಲುಗಳ ಸಮಸ್ಯೆ ಕೂಡ ಬಗೆಹರಿಯುತ್ತದೆ. ಇದು ಒಂದು ಮೂತ್ರವರ್ಧಕ ವಾಗಿದ್ದು ಮೂತ್ರ ವಿಸರ್ಜನೆಯನ್ನು ಉತ್ತೇಜಿಸಿ ಕರಗಿದ ಕಿಡ್ನಿ ಕಲ್ಲುಗಳು ಮೂತ್ರದ ಮುಖಾಂತರ ಸುಲಭವಾಗಿ ದೇಹದಿಂದ ಈಚೆ ಬರಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಕಿಡ್ನಿ ಕಲ್ಲುಗಳಿಂದ ಉಂಟಾಗುವ ಯಾವುದೇ ನೋವುಗಳನ್ನು ಸಹ ಸುಲಭವಾಗಿ ನಿವಾರಣೆ ಮಾಡುತ್ತದೆ.

ಸೇಬು ಹಣ್ಣು (Apple)

ದಿನಕ್ಕೊ೦ದು ಸೇಬನ್ನು ಸೇವಿಸುವುದರಿ೦ದ ಮೂತ್ರಪಿ೦ಡಗಳಲ್ಲಿನ ಕಲ್ಲುಗಳು ಕರಗಿಹೋಗುತ್ತವೆ. ಸೇಬಿನಲ್ಲಿ ಕೆಲವು ಕಿಣ್ವಗಳಿದ್ದು, ಅವು ಕಾಲಕ್ರಮೇಣವಾಗಿ ಮೂತ್ರಪಿ೦ಡಗಳಲ್ಲಿನ ಹರಳುಗಳನ್ನು ಕರಗಿಸಿ, ಮೂತ್ರದ ಮೂಲಕ ಶರೀರದಿ೦ದ ಆ ಹರಳುಗಳು ಹೊರಹೋಗುವ೦ತೆ ಮಾಡುತ್ತವೆ.

ಕಲ್ಲ೦ಗಡಿ (Pineapple)

ಮೂತ್ರಪಿ೦ಡಗಳಲ್ಲಿನ ಹರಳುಗಳ ನಿವಾರಣೆಗೆ ಕಲ್ಲ೦ಗಡಿ ಹಣ್ಣು ಅತ್ಯುತ್ತಮವಾದ ಪರಿಹಾರೋಪಾಯವಾಗಿದೆ. ಕಲ್ಲ೦ಗಡಿ ಹಣ್ಣು ಜಲಾ೦ಶದಿ೦ದ ಸಮೃದ್ಧವಾಗಿದ್ದು, ಮೂತ್ರಪಿ೦ಡಗಳಲ್ಲಿನ ಹರಳುಗಳನ್ನು ಪರಿಣಾಮಕಾರಿಯಾಗಿ ಹೊರಗೆಡಹಲು ನೆರವಾಗುತ್ತದೆ. ಮೂತ್ರಪಿ೦ಡಗಳಲ್ಲಿನ ಹರಳುಗಳನ್ನು ಹೊರಹಾಕುವುದಕ್ಕಾಗಿ ಪ್ರಾಚೀನ ಕಾಲದಲ್ಲಿ ಯಾವುದೇ ಔಷಧವು ಅಲಭ್ಯವಾಗಿದ್ದಾಗ, ಆ ಹರಳುಗಳನ್ನು ರೋಗಿಯ ಶರೀರದಿ೦ದ ಹೊರಹಾಕಲು ವೈದ್ಯರು ರೋಗಿಗೆ ಕಲ್ಲ೦ಗಡಿ ಹಣ್ಣನ್ನು ಸೇವಿಸುವ೦ತೆ ಶಿಫಾರಸು ಮಾಡುತ್ತಿದ್ದರು.

ಮೂತ್ರಪಿ೦ಡದಾಕಾರದ ಹುರುಳಿ

ಇವೂ ಕೂಡ, ಮೊದಲು ಮೂತ್ರಪಿ೦ಡಗಳಲ್ಲಿನ ಕಲ್ಲುಗಳನ್ನು ಕರಗಿಸಿ, ಬಳಿಕ ಅವುಗಳನ್ನು ಮೂತ್ರದ ಮೂಲಕ ಹೊರಹಾಕುತ್ತವೆ. ಮೂತ್ರಪಿ೦ಡಗಳಲ್ಲಿ ಹರಳುಗಳು ಉ೦ಟಾಗದ೦ತೆ ತಡೆಗಟ್ಟಲು ಹಾಗೂ ಈಗಾಗಲೇ ಉ೦ಟಾಗಿರಬಹುದಾದ ಹರಳುಗಳನ್ನು ಹೊರದಬ್ಬಲು ಪ್ರತಿದಿನವೂ ನೀವು ಮೂತ್ರಪಿ೦ಡಾಕಾರದ ಹುರುಳಿಯನ್ನು ಸೇವಿಸತಕ್ಕದ್ದು. ಮೂತ್ರಪಿ೦ಡಗಳಲ್ಲಿರಬಹುದಾದ ಹರಳುಗಳನ್ನು ತೊಳೆದು ಹೊರದೂಡಲು ಲಭ್ಯವಿರುವ ಅತ್ಯುತ್ತಮವಾದ ಮನೆಮದ್ದುಗಳ ಪೈಕಿ ಒ೦ದಾಗಿದೆ.

ಬೇಕಿಂಗ್ ಸೋಡಾ (Baking soda)

ಮೂತ್ರದ ಆಮ್ಲೀಯ ಅಂಶವನ್ನು ಕಲ್ಲು ರಚನೆಗೆ ಕಾರಣವಾದ ಅಡುಗೆ ಸೋಡಾದ ಕ್ಷಾರತೆಯಿಂದ ಕಡಿಮೆ ಮಾಡಬಹುದು. ಆದ್ದರಿಂದ ಇದು ಪ್ರಯೋಜನಕಾರಿಯಾಗಬಹುದು. ಆದ್ದರಿಂದ, ಮಟ್ಟಗಳು ಕಡಿಮೆಯಾದರೆ ಆ ಕಲ್ಲುಗಳು ಮೂತ್ರ ವ್ಯವಸ್ಥೆಯ ಮೂಲಕ ಹಾದುಹೋಗಬಹುದು. ಉಗುರುಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಅಡುಗೆ ಸೋಡಾ ಬೆರೆಸಿ ಕುಡಿಯಿರಿ.

ವೀಟ್ ಗ್ರಾಸ್ ರಸ

ವೀಟ್ ಗ್ರಾಸ್ ಸಂಯುಕ್ತಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಅದು ಮೂತ್ರದ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಮೂತ್ರಪಿಂಡದ ಕಲ್ಲುಗಳು ಅವುಗಳ ರಚನೆಯ ಅಪಾಯವನ್ನು ಕಡಿಮೆ ಮಾಡುವಾಗ ಹೆಚ್ಚು ಸುಲಭವಾಗಿ ಹಾದುಹೋಗಲು ಅನುವು ಮಾಡಿಕೊಡುತ್ತದೆ.

ನೆಲ್ಲಿಕಾಯಿ

ಮೂತ್ರಪಿಂಡಗಳಲ್ಲಿ ಕಲ್ಲಿನ ಸಮಸ್ಯೆ ನಿವಾರಿಸಲು ಆಮ್ಲಾ ಪ್ರಯೋಜನಕಾರಿಯಾಗಿದೆ. ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ ಪ್ರತಿದಿನ ಒಂದು ಚಮಚ ಆಮ್ಲಾ ಪುಡಿಯನ್ನು ಸೇವಿಸಿ. ಆಮ್ಲಾ ಪುಡಿಯನ್ನು ಸೇವಿಸುವುದರಿಂದ ಮೂತ್ರಪಿಂಡದಲ್ಲಿನ ಕಲ್ಲಿನ ಸಮಸ್ಯೆಯನ್ನು ನಿವಾರಿಸಬಹುದು.

ಸಮಾರೋಪ

ಮೂತ್ರಪಿಂಡದ ಕಲ್ಲುಗಳನ್ನು ತೊಡೆದುಹಾಕಲು ಮತ್ತು ಆರೋಗ್ಯಕರವಾಗಲು ಈ ಲೇಖನವು(Home remedies for kidney stones in kannada) ನಿಮಗೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ.

Leave a Comment

error: Content is protected !!