Pimples: ಮೊಡವೆ ನಿವಾರಣೆಗೆ ಸುಲಭ ಮನೆಮದ್ದು

ಮೊಡವೆ ನಿವಾರಣೆಗೆ ಮನೆಮದ್ದು, home remedies for acne spots, treatment for pimples in Kannada.

ಮೊಡವೆ ಗುಳ್ಳೆಗಳಿಗೆ ಕಾರಣ ಏನು?

ಹದಿ ಹರೆಯುವ ವಯಸ್ಸಿನಲ್ಲಿ ಸಾಕಷ್ಟು ಉತ್ಸಾಹ, ಹುಮ್ಮಸು ಎಲ್ಲಾ ತುಂಬಿರುತ್ತದೆ. ಈ ವಯಸ್ಸಿನಲ್ಲಿ ಇರುವ ಹುಡುಗ ಹುಡುಗಿಯರನ್ನು ಕಾಡುವ ಸಮಸ್ಯೆ ಮೊಡವೆಗಳು. ಇವು ಮುಖದ ಅಂದಕ್ಕೆ ಧಕ್ಕೆ ತರುತ್ತವೆ. ಇವುಗಳನ್ನು ನಿವಾರಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಹಲವಾರು ನಿವಾರಣೋಪಾಯಗಳನ್ನು ಹುಡುಕುತ್ತಾರೆ.

ಇವುಗಳನ್ನು ತಡೆಗಟ್ಟಲು ನೀವು ಕೆಲವು ಸರಳ ಕ್ರಮಗಳನ್ನು ಅನುಸರಿಸಿರಿ. ಮೊಟ್ಟೆಯ ಹಳದಿ, ಮಾಂಸಹಾರಿ, ಜಂಕ್‌ ಫುಡ್ಸ್, ಕರೆದ ಪದಾರ್ಥಗಳು, ಸಿಹಿತಿಂಡಿಗಳು ಇವುಗಳ ಸೇವನೆ ಸ್ಥಗಿತಗೊಳಿಸಿ, ಹಸಿತರಕಾರಿ, ಸೊಪ್ಪು, ಹಣ್ಣು ಹಂಪಲುಗಳನ್ನು ತಿನ್ನಬೇಕು.




ಪ್ರತಿನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ನೀರಿಗೆ ನಿಂಬೆರಸ ಸೇರಿಸಿ ಕುಡಿಯಬೇಕು. 12 ಗಂಟೆಯ ಏನ್ನನ್ನಾದರು ಕುಡಿಯಬೇಕು, ಇರುವವರು ಇದನ್ನು ಮಾಡದೇ ನಂತರವೇ ಬಿಸಿನೀರು 1 ಗ್ಲಾಸ್ ಕುಡಿಯಬೇಕು.

ಮೊಡವೆ ನಿವಾರಣೆಗೆ ಮನೆಮದ್ದು

ಕಡಲೆಹಿಟ್ಟು, ಮುಲ್ತಾನಿ ಮಿಟ್ಟಿಯನ್ನು ಸಮ ಪ್ರಮಾಣದಲ್ಲಿ ಬೆರಸಿ ಆ ಪುಡಿಯನ್ನು ಹಸಿ ಹಾಲಿನಲ್ಲಿ ಒಂದು ಚಮಚೆಯಪ್ಪು ಹಾಕಿ ಮುಖಕ್ಕೆ ಹಚ್ಚಿಕೊಂಡು ಕೈಬೆರಳಿನಿಂದ ಮಸಾಜ್ ಮಾಡಿರಿ. ಈ ರೀತಿ ವಾರಕ್ಕೆ ಎರಡು ಮೂರು ಬಾರಿ ಮಾಡಿದರೆ ಮೊಡವೆಗಳ ಹಾವಳಿ ಕಡಿಮೆಯಾಗಿ ಮುಖ ಕಾಂತಿಯುಕ್ತವಾಗುತ್ತದೆ.

ಟಮೋಟ ಪ್ರತಿನಿತ್ಯ ಮುಖಕ್ಕೆ ತಿಕ್ಕುವುದರಿಂದ ಮುಖದ ಚರ್ಮ ಮೃದುವಾಗುವುದಲ್ಲದೆ ಹೊಳೆಯುತ್ತದೆ ಮತ್ತು ಮೊಡವೆಗಳನ್ನು ತಡೆಗಟ್ಟಬಹುದು.

ಪುದೀನಾ ರಸ, ಇಲ್ಲವೇ ತುಳಸಿ ರಸ ಪ್ರತಿನಿತ್ಯ ಹಚ್ಚುವುದರಿಂದ ಮೊಡವೆಗಳು, ಕಲೆಗಳು ಕಡಿಮೆಯಾಗಿ ಮುಖ ತೇಜಸ್ಸಿನಿಂದ ಹೊಳೆಯುತ್ತದೆ.

ಮೊಡವೆಗಳನ್ನು ಚಿವುಟಿಕೊಳ್ಳಬಾರದು. ಕಲೆಗಳು ಬೀಳುತ್ತವೆ. ತಿಂಗಳಿಗೊಮ್ಮೆಯಾದರು ಫೇಶಿಯಲ್ ಮಾಡಿಸುವುದರಿಂದ ಪಿಂಪಲ್ಸ್‌ ತಡೆಗಟ್ಟಬಹುದು. ಮೊಡವೆಗಳು ತುಂಬಾ ಜಾಸ್ತಿ ಇದ್ದಾಗ ಹೆಚ್ಚು ಹೊತ್ತು ಸ್ಟೀಮಿಂಗ್ ತೆಗೆದುಕೊಳ್ಳಬೇಡಿ ಜೀರಿಗೆ ಪೇಸ್ಟ್ ಮಾಡಿ ಮೊಡವೆಗಳ ಮೇಲೆ ಲೇಪಿಸಿರಿ.

ಜಾಜಿಕಾಯಿ ಹಾಲಿನಲ್ಲಿ ತೇಯ್ದು ಮೊಡವೆಗಳ ಮೇಲೆ ಲೇಪಿಸಿ. ಜೇನುತುಪ್ಪ ಕಲೆಗಳ ಮೇಲೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ ಈ ರೀತಿ ಪ್ರತಿನಿತ್ಯ ಮಾಡಿದರೆ ಕಲೆಗಳು ಹೊರಟು ಹೋಗುತ್ತವೆ.

ಕರ್ಪೂರದ ಎಣ್ಣೆ 2 ಟೀ ಚಮಚ, ಟಮೋಟ ಜ್ಯೂಸ್ 1 ಟೀ ಚಮಚ, ಜೇನುತುಪ್ಪ 1 ಟೀ ಚಮಚ ಎಲ್ಲಾ ಸೇರಿಸಿ ಮುಖಕ್ಕೆ ಲೇಪಿಸಿ 15ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದು ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಕಲೆಗಳು ಬೇಗನ ಹೊರಟು ಹೋಗುತ್ತವೆ.

ಬೆಳ್ಳುಳ್ಳಿ ಲೋಷನ್‌

ಮುಲ್ತಾನಿ ಮಿಟ್ಟಿ – 1ಟೇಬಲ್ ಚಮಚ, 1 ಟೀ ಚಮಚ ಜೇನುತುಪ್ಪ, ಕ್ಯಾರೆಟ್ ಜ್ಯೂಸ್ 1 ಟೀ ಚಮಚ, ಬೆಳ್ಳುಳ್ಳಿ ಪೇಸ್ಟ್ : ಟೀ ಚಮಚ. ಎಲ್ಲವನ್ನು ಚೆನ್ನಾಗಿ ಕಲಸಿ ಮಾಸ್ಕ್‌ ಹಾಕಿಕೊಳ್ಳಿ. 20 ನಿಮಿಷದ ನಂತರ ಯಥಾ ರೀತಿಯಾಗಿ ಮೊದಲು ಉಗುರು ಬೆಚ್ಚಗಿನ ನೀರಿನಿಂದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

ಮೊಡವೆ ನಿವಾರಣೆಗೆ ಮನೆಮದ್ದು
ಮೊಡವೆ ನಿವಾರಣೆಗೆ ಮನೆಮದ್ದು

ನಿಂಬೆರಸ, ಜೇನು, ಅರಿಶಿನ ಪುಡಿಗಳನ್ನು ಬೆರೆಸಿ ಮುಖಕ್ಕೆ ಹಚ್ಚಿ ಹತ್ತು ನಿಮಿಷ ಬಿಟ್ಟು ಮುಖ ತೊಳೆಯಿರಿ, ಇದೇ ರೀತಿ ವಾರಕ್ಕೆ 2 ಬಾರಿ ಮಾಡಿದರೆ ಮೊಡವೆಯ ಕಲೆಗಳು ಮಾಯವಾಗುತ್ತವೆ.

ಗಟ್ಟಿ ಹುಳಿ ಮೊಸರಿಗೆ ಕಡಲೆ ಅಥವಾ ಅಕ್ಕಿ ಹಿಟ್ಟು ಸೇರಿಸಿ ಮುಖ, ಕತ್ತು, ಕೈಕಾಲುಗಳಿಗೆ ಹಚ್ಚಿ ಅರ್ಧ ಗಂಟೆ ನೆನೆದು ಸ್ನಾನ ಮಾಡುವುದರಿಂದ ಮೈಗೆ ತಗುಲಿರುವ ಸೂರ್ಯ ಕಂದು ಹೋಗುವುದಲ್ಲದೇ ಚರ್ಮ ಮೃದುವಾಗಿಯೂ ಹೊಳಪ್ಪುಳ್ಳದ್ದೂ ಆಗುತ್ತದೆ.

ಒಂದು ದೊಡ್ಡ ಚಮಚ ಸೌತೆಕಾಯಿ ರಸಕ್ಕೆ ಅರ್ಧ ಚಮಚ ನಿಂಬೆರಸ ಹಾಗೂ ನಾಲೈದು ಹನಿ ಪನ್ನೀರು ಸೇರಿಸಿ ಮುಖ ಕೈ ಸವರಿ 15 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ. ಮುಖ ಕಾಂತಿಯುತವಾಗುತ್ತದೆ.

ಚಂದನ ಹಾಗೂ ಗಂಧವನ್ನು ತೇಯ್ದು ಮೊಡವೆಗಳಿದ್ದ ಭಾಗಗಳಿಗೆ ಹಚ್ಚಿದರೂ ಅವುಗಳ ನಿವಾರಣೆಯಾಗುತ್ತವೆ. ಅಕ್ಕಿಹಿಟ್ಟು – ಕಡಲೆಹಿಟ್ಟು ಯಾವುದಾದರೊಂದನ್ನು ಟಟ ರಸದಲ್ಲಾಗಲೀ, ಸೌತನಾಯಿಯ ರಸದಲ್ಲಾಗಲೀ, ಹುಳಿ ಮೊಸರಿನಲ್ಲಾಗಲೀ ಸೇರಿಸಿ ಮುಖಕ್ಕೆ ಹಚ್ಚಿ ಹದಿನೈದು ನಿಮಿಷಗಳ ಕಾಲ ತಡೆದು ತೊಳೆದುಕೊಂಡಲ್ಲಿ ಮುಖದ ಚರ್ಮ ಅಂದವಾಗುತ್ತದೆ.

Home remedies for acne spots





ಬಿಸಿಲುಗಾಲದಲ್ಲಿ ಬಿಸಿಲಲ್ಲಿ ಬಹಳ ಹೊತ್ತಿನವರೆಗೆ ಇರುವವರಿಗೆ ಸನ್‌ಬರ್ನ್, ಬಿಸಿಲುಗಂದು ಬರುವುದುಂಟು. ಸೌತೆಕಾಯಿಯ ತುರಿಯನ್ನು ತೆಗೆದು ರಸಹಿಂಡಿ ಅದಕ್ಕೆ ನಾಲ್ಕು ತೊಟ್ಟು ಗ್ಲಿಸರಿನ್, ಅರ್ಧ ಚಮಚ ಪನ್ನೀರು ಸೇರಿಸಿ ಬಿಸಿಲುಗಂಟು ಬಂದಿರುವ ಸ್ಥಳಗಳಿಗೆ ಹಚ್ಚಬೇಕು.

ನಿಮ್ಮದು ಸಾಧಾರಣ ಚರ್ಮವಿದ್ದರೆ ಒಂದು ಮೊಟ್ಟೆ, ಒಂದು ಸ್ಪೂನ್ ಜೇನು, ರೋಸ್‌ವಾಟ‌ ಕೆಲವು ಹನಿಗಳು, ಎಲ್ಲವನ್ನೂ ಬೆರೆಸಿ ಬೆರಳ ತುದಿಯಿಂದ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಪಪಾಯಿ ಕಾಯಿಯ ರಸ ಹಚ್ಚುವುದರಿಂದ ಮೊಡವೆಗಳು ಒಣಗುತ್ತವೆ. ಬಿಸಿ ಜೇನುತುಪ್ಪಕ್ಕೆ ಕಡಲೆಒಟ್ಟು ಸೇರಿಸಿ ಮೊಡವೆ ಇರುವಲ್ಲಿ ಲೇಪಿಸಿ ನಂತರ ಬಿಸಿನೀರಿನಿಂದ ಮುಖ ತೊಳೆಯಬೇಕು. ಜಾಜಿಕಾಯಿ ಹಾಗೂ ಕಾಳು ಮೆಣಸು ನೀರಿನಲ್ಲಿ ತೇಯ್ದು ಮಿಶ್ರಣ ಮಾಡಿ ಮೊಡವೆಯುಕ್ತ ಮುಖಕ್ಕೆ ಲೇಪಿಸಿ ಒಣಗಿದ ನಂತರ ತೊಳೆಯಿರಿ.

ಮುಖ ತೊಳೆದು ರಾತ್ರಿ ಗಟ್ಟಿ ಮೊಸರಿಗೆ ಕಡಲೆಹಿಟ್ಟು ಸೇರಿಸಿ. ಮುಖ, ಕತ್ತುಗಳ ಮೇಲೆ ನಯವಾಗಿ ಉಜ್ಜಿ ತಣ್ಣೀರಿನಲ್ಲಿ ಮುಖ ತೊಳೆದು ಒರೆಸಿಕೊಳ್ಳಿ, ಮಲಗುವ ಮುನ್ನ ಎರಡು ಚಮಚ ನಿಂಬೆರಸಕ್ಕೆ ಒಂದು ಚಮಚ ಗ್ಲಿಸರಿನ್ ಸೇರಿಸಿ ಮುಖ ಕತ್ತುಗಳ ಮೇಲೆ ಬಳಸಿ ಮಲಗಿ ಮರುದಿನ ನಿಮ್ಮ ತ್ವಚೆ ತುಂಬಾ ಬದಲಾಗುತ್ತದೆ. ಪ್ರತಿ ತಿಂಗಳಿಗೊಮ್ಮೆ ಹೀಗೆ ಮಾಡಿದರೆ ಮುಖದ ಕಾಂತಿ ಇಮ್ಮಡಿಸುತ್ತದೆ.

ಗುಲಾಬಿ ಹೂವಿನ ದಳಗಳನ್ನು ಪನ್ನೀರಿನಲ್ಲಿ ರುಬ್ಬಿ ಮೊಡವೆಗಳಿರುವ ಜಾಗಗಳಿಗೆ ಹಚ್ಚಿದರೆ ಮೊಡವೆಗಳು ದೂರ ಆಗುತ್ತದೆ. ಅಜ್ಞಾನ (ಓಂ ಕಾಳು) ಸಣ್ಣಕ್ಕೆ ಪುಡಿ ಮಾಡಿ ದೊಸರಿನಲ್ಲಿ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 2 ಗಂಟೆಯ ನಂತರ ತೊಳೆದುಕೊಳ್ಳಿ.

ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದು ಉಗುರುಬೆಚ್ಚಗೆ ಇರುವಾಗ ಮುಖ ವಿಟಮಿನ್ ‘ಎ’ ಮತ್ತು ‘ಇ’ ಮೊಡವೆಗಳನ್ನು ತಡೆಗಟ್ಟಲು ಅಗತ್ಯ. ಆದ್ದರಿಂದ ಮೊಳಕೆಗಳು, ಹಸಿರು ತರಕಾರಿ, ಹಣ್ಣುಗಳನ್ನು ಹೆಚ್ಚು ಸೇವಿಸಿರಿ.

Before you leave,

Also read: Home remedies for glowing skin

Leave a Comment

error: Content is protected !!