ಮೃದು ಮತ್ತು ಸುಂದರವಾದ ಕೈಗಾಗಿ ಟಿಪ್ಸ್

ಸುಂದರ ಕೈಗಳಿಗಾಗಿ ಟಿಪ್ಸ್

ಕೈಗಳು ಅಂದವಾಗಿ ಇರಬೇಕು. ಯಾರೊಂದಿಗಾದರು ಕೈ ಜೋಡಿಸಿ ದಾಗ ನಮ್ಮ ಕೈ ಒರಟಾಗಿ ಇದ್ದರೆ ನಮ್ಮ ಮೇಲಿನ ಒಳ್ಳೆಯ ಭಾವನೆ ಸ್ವಲ್ಪ ಕಡಿಮೆಯಾಗುತ್ತೆ.

ಸಹಜವಾಗಿ ಅವರು ಎಂತಹ ರೀತಿಯಲ್ಲಿ ತಮ್ಮ ಕೈಗಳನ್ನು ಎಳೆದುಕೊಳ್ಳುತ್ತಾರೆ. ಅವರಿಗೆ ಅನ್ನುವ ಅವಕಾಶ ನಾವು ಒದಗಿಸಿಕೊಡಬಾರದು.

ಸದಾ ನೀರಿನಲ್ಲಿ ಸೋಪು,ಪಾತ್ರ, ಬಟ್ಟೆ, ನೀರಿನಲ್ಲಿ ನೆನೆಯುವ ಗೃಹಿಣಿಯರ ಕೈಗಳು ಒರಟಾಗಿ ಒಡೆದುಕೊಂಡು ಹೋಗಿರುತ್ತವೆ. ಮೃದುವಾದ ಕೈಗಳನ್ನು ಪಡೆಯಲು ಕೆಲವು ಸಲಹೆಗಳು.

ವಾರಕ್ಕೆ ಒಂದು ಸಾರಿ ಉಗುರುಗಳನ್ನು ತೆಗೆಯಿರಿ, ಉಗುರು ಬೆಳೆಸಿ ಆಕಾರಕ್ಕೆ ತಂದುಕೊಳ್ಳಬೇಕು ಎನ್ನುವವರು ಉಗುರುಗಳನ್ನು ವಾರಕ್ಕೆ ಒಂದು ಬಾರಿ ಟ್ರಿಮ್ ಮಾಡಿರಿ. ನೇಲ್ ಪಾಲಿಷ್ ಸ್ವಲ್ಪ ಬಿಟ್ಟರೆ ಚೆನ್ನಾಗಿ ಕಾಣುವುದಿಲ್ಲ, ನೇಲ್ ರಿಮೂವರ್‌ನಿಂದ ಮತ್ತೆ ನೇಲ್ ಪಾಲಿಷ್ ಹಾಕಿಕೊಳ್ಳಿ.

ತಿಂಗಳಿಗೊಮ್ಮೆ ಮ್ಯಾನಿಕ್ಯು‌ ಮಾಡಿಕೊಳ್ಳಿ.

ಮ್ಯಾನಿಕ್ಯು‌ ಮಾಡುವ ವಿಧಾನ

ಒಂದು ಅಗಲವಾದ ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರು, ಸ್ವಲ್ಪ ಶಾಂಪು ಇಲ್ಲ ಮೃದುವಾದ ಸೋಪನ್ನು ಹಾಕಿ ಕೈಗಳನ್ನು 15 ನಿಮಿಷ ನೀರಿನಲ್ಲಿ ನೆನಸಿ ನಂತರ ಮೆತ್ತಗಿರುವ ಬ್ರಷ್ (ಹ್ಯಾಂಡ್‌ಸ್)ನಿಂದ ಕೈಯನ್ನು ಸಿಕ್ಕಿ ಮುಖ್ಯವಾಗಿ ಉಗುರುಗಳ ಸಂದಿಯಲ್ಲಿ ಕ್ಲೀನ್ ಮಾಡಿರಿ.

ಡೆಡ್ ಸ್ಕಿನ್ (ಒರಟು ಚರ್ಮ ಗಟ್ಟಿಯಾದ) ಚರ್ಮವನ್ನು ಪ್ರಿ ಮಿಕ್ ಸ್ಟೋನ್ (Pumicestone) ನಿಂದ ತಿಕ್ಕಿ ತೆಗೆಯಿರಿ.

ಉಗುರುಗಳಿಗೆ ಅಂದವಾಗಿ ಆಕಾರಕೊಟ್ಟು ದಪ್ಪ ಕಡಿಮೆ ಮಾಡಿ ಕೈ ಚೆನ್ನಾಗಿ ಒರೆಸಿ ನಂತರ ನೇಲ್ ಪಾಲಿಷ್ ಹಚ್ಚಿರಿ.

ನಂತರ ಹ್ಯಾಂಡ್ ಕ್ರೀಂ ಹಾಕಿ ಸ್ವಲ್ಪ ಕೈಗಳನ್ನು ಮಸಾಜ್ ಮಾಡಿರಿ.ಎ ಕೈಗಳ ಬಿಸಿಲಿಗೆ ತಿರುಗಿ ಕಪ್ಪಾಗಿದ್ದರೆ ‘ಸುಂದರ ಚರ್ಮಕ್ಕೆ’ ಭಾಗದಲ್ಲಿ ಬರೆದಂತಹ ಸಲಹೆಗಳನ್ನು ಬಾರಿಸಿ.ಮೊಣಕೈ ಎಲ್ಲಾ ಕಡೆ ಇಟ್ಟು ಕಪ್ಪಾಗಿ, ಒರಟು ಚರ್ಮ ಬೆಳೆದುಕೊಂಡು ಹೋಗಿರುತ್ತೆ ಮತ್ತು ಕೆಲವರಿಗೆ ಚಿಕ್ಕ ಗುಳ್ಳೆಗಳಂತೆ ಚುಕ್ಕೆ ಕಾಣಿಸುತ್ತದೆ.

ಅಂಥವರು ನಿಂಬೆಹಣ್ಣಿನ ಸಿಪ್ಪೆಯಿಂದಬು ಕೊ೦ಡರೆ ಸ್ಪಂದಿನಂತಿರುವ ಕಲ್ಲಿನಿಂದ ತಿಕ್ಕಿಕೊಂಡು ಬಾಡಿ ಲೋಷನ್ ಲೇ ಬೇಬಿ ತೈಲವನ್ನು ಮೊಣಕೈಗೆ ಹಚ್ಚಿರಿ. ಇಲ್ಲಿ ಆಲಿವ್ ಆಯಿಲ್ ಬಿಸಿ ಮಾಡಿ ಮೊಣಕೈಗೆ ಮಾಲಿಷ್ ಮಾಡಿದರೆ ಕೈಗಳ ಸೌಂದರ್ಯ ಹೆಚ್ಚುತ್ತದೆ.

ಒಡೆದ ಕೈಕಾಲುಗಳನ್ನು ಸರಿಪಡಿಸಲು ಗ್ಲಿಸರಿನ್ ಆಲಿವ್‌ ಆಯಿಲ್‌ಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ ನಿಂಬೆರಸ ಬೆರಸಿ (ಕಾಲುಗಳಿಗೆ ತಿಕ್ಕಿ ಅರ್ಧಗಂಟೆಯ ನಂತರ ಸೋಪು ಬಳಸದೆ ಬರೀ ನೀರಿನಿಂದ ಕೈ ತೊಳೆಯಿರಿ. ಹೀಗೆ ವಾರಕೊಮ್ಮೆ ಮಾಡಿದರೆ ಮೃದುವಾಗುತ್ತದೆ.

ಕೊಳೆತ ಟಮೋಟ ಮೊಣಕೈಗೆ ಹಚ್ಚಿಕೊಂಡರೆ ಕಪ್ಪು ಗುರುತುಗಳು ಹೋಗುತ್ತವೆ. ಟಮೋಟ ರಸ ನಿಂಬೆರಸ ಸಮಪ್ರಮಾಣದಲ್ಲಿ ಬೆರಸಿ ಕೈಗಳಿಗೆ ತಿಕ್ಕಿದರೆ ಅವು ಮೃದುವಾಗುತ್ತವೆ. ಒಡೆದ ಬೆರಳುಗಳಿಗೆ ಬಣ್ಣ ಇಲ್ಲವೇ ಕೊಬ್ರಿಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಕೈಗಳಿಗೆ ವ್ಯಾಯಾಮವೆಂದರೆ ಸಂಜೆ ಮತ್ತು ಬೆಳಿಗ್ಗೆ ಕೈಗಳನ್ನು ವೃತ್ತಾಕಾರವಾಗಿ ಮೇಲೆ ಕೆ ಳಗೆ ತಿರುಗಿಸುತ್ತಾ ಇರಿ ಈ ರೀತಿ 10-15 ಬಾರಿ ಮಾಡಿರಿ.

ವಾರಕ್ಕೆ ಒಂದು ಸಾರಿಯಾದರು ಲೋಷನ್ ಇಲ್ಲವೇ ಕೊಬ್ರಿ ಎಣ್ಣೆಯಿಂದ ಮಾಲಿಷ್ಮಾ ಡಿರಿ, ಇದರಿಂದ ರಕ್ತ ಸಂಚಾರ ಹೆಚ್ಚಾಗಿ ಕೈಗಳು ಮೃದುವಾಗಿ ಶಕ್ತಿ ಕೂಡ ಬರುತ್ತದೆ.

ಉಗುರುಗಳು ಹೊಳಪಾಗಬೇಕೆಂದರೆ ಅವುಗಳಿಗೆ ನಿಂಬೆರಸ ಹಚ್ಚಿ ಅರ್ಧಗಂಟೆ ಬಿಟ್ಟು ಬೆಚ್ಚಗಿನ ನೀರಿನಿಂದ ಕೈ ತೊಳೆಯಿರಿ.

ಉಗುರುಗಳ ಮೇಲೆ ಕಲೆಗಳು ಇದ್ದರೆ ಹಸಿ ಆಲೂಗಡ್ಡೆ ಇಲ್ಲ ನಿಂಬೆರಸದಿಂದ ತಿಕ್ಕಿರಿ. ಉಗುರುಗಳನ್ನು ಕತ್ತರಿಯಿಂದ ಕತ್ತರಿಸಬೇಡಿ, ಉಗುರು ಕತ್ತರಿಸಿದ ನಂತರ ಅವುಗಳ ತುದಿಗಳನ್ನು ಕಟ್ಟ‌ನ ರಫ್‌ಸೈಡ್‌ನಿಂದ ಸ್ಟಫ್ ಮಾಡಿರಿ.

ಉಗುರುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ಮತ್ತು ಮಿತಿಮೀರಿದ ಬೆಳವಣಿಗೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ. ರೋಸ್‌ ವಾಟರ್, ಗ್ಲಿಸರಿನ್ ಮತ್ತು ನಿಂಬೆರಸ ಎಲ್ಲ ಸಮಪ್ರಮಾಣದಲ್ಲಿ ಬೆರೆಸಿ ಈ ಹೆ ಸ್ವಚ್ಛವಾಗಿರುವ ಬಾಟಲಿಯಲ್ಲಿ ತುಂಬಿ ಇಡಿ. ಪ್ರತಿನಿತ್ಯ ಇದನ್ನು ಕೈಗಳಿಗೆ ಲೇಪಿಸಿದರೆ ಕೈಗಳು ಬೆಳ್ಳಗಾಗುತ್ತವೆ.

ಆಲಿವ್‌ಆಯಿಲ್ ಸ್ವಲ್ಪ ಬಿಸಿ ಮಾಡಿ ಅದರಲ್ಲಿ ನಿಮ್ಮ ಕೈಗಳನ್ನು ಇಟ್ಟು ಸ್ವಲ್ಪ ಮಸಾಜ್ಮಾಡಿಕೊಳ್ಳಿ ನಂತರ ಕೈ ತೊಳೆದುಕೊಳ್ಳಿ, ಕೈ ಮೃದುವಾಗಿರುತ್ತವೆ, ಮತ್ತೆ ಬಳಸಿದ ಎಣ್ಣೆ ಬಾಟಲ್‌ನಲ್ಲಿ ತುಂಬಿ ಇಡಿ. ಆ ಎಣ್ಣೆಯನ್ನು ಬಿಸಿ ಮಾಡಿ ಮತ್ತೆ ಮತ್ತೆ ಖಾಲಿಯಾಗುವ ತನಕ ಬಳಸಬಹುದು.

ಕೊಬ್ರಿಎಣ್ಣೆ, ಗ್ಲಿಸ್‌ರಿನ್‌, ರೋಸ್‌ವಾಟ‌ ಮಿಶ್ರಣ ಮಾಡಿ ಮಸಾಜ್ ಮಾಡಿ ಕೈಗಳು ಸುಕೋಮಲವಾಗಿ ಇರುತ್ತವೆ.

ಹ್ಯಾಂಡ್ ಕ್ರೀಂ

ಬಾದಾಮಿ ಎಣ್ಣೆ – 2 ಟೀ ಚಮಚ, ಜೇನುತುಪ್ಪ 1 ಟೀ ಚಮ ಬೆರಸಿ ಮಸಾಜ್ ಮಾಡಿರಿ. ರಾತ್ರಿ ಕಾಟನ್ ಗ್ಲಾಸ್ ಹಾಕಿಕೊಂಡು ಮಲಗಿರಿ. ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಸೋಪು ಹಾಕಿಕೊಂಡು ಕೈ ತೊಳೆಯಿರಿ ಕೈಗಳು ಮೃದುವಾಗುತ್ತದೆ. ಈ ರೀತಿ ನಿಮ್ಮ ಕೈ ಮೃದುವಾಗುವವರೆಗೂ ಮಾಡಿರಿ.

Before you leave,

Also read: Hair fall tips in Kannada

Leave a Comment

error: Content is protected !!